ಹೈದರಾಬಾದ್: ತೆಲಂಗಾಣದ ಮೇಡ್ಚಲ್-ಮಲ್ಕಾಜ್‍ಗಿರಿ ಜಿಲ್ಲೆಯ ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ ಕನಿಷ್ಠ 30 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲೆಯ ಉಪ ವೈದ್ಯಾಧಿಕಾರಿ ತಿಳಿಸಿದ್ದಾರೆ.
Advertisement
ಕೋವಿಡ್ -19 ಪಾಸಿಟಿವ್ ದೃಢಪಟ್ಟವರಲ್ಲಿ 25 ವಿದ್ಯಾರ್ಥಿಗಳು ಮತ್ತು ಐವರು ಬೋಧನಾ ಸಿಬ್ಬಂದಿಯವರಾಗಿದ್ದು, ಇದೀಗ ರೋಗಿಗಳಿಗೆ ಪ್ರತ್ಯೇಕವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಯಾರಲ್ಲಿಯೂ ಗಂಭೀರವಾದಂತಹ ರೋಗಲಕ್ಷಣಗಳು ಕಂಡು ಬಂದಿಲ್ಲ ಎಂದು ಹೇಳಲಾಗುತ್ತದೆ. ಇದನ್ನೂ ಓದಿ: ಕೊರೊನಾ ಹೊಸ ವೈರಸ್ B.1.1.529 ಪತ್ತೆ – ಭಾರತದಲ್ಲಿ ಆತಂಕ
Advertisement
Advertisement
ಮಹೀಂದ್ರಾ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಲಾಕ್‍ಡೌನ್ ಗೊಳಿಸಲಾಗಿದ್ದು, ಎಲ್ಲಾ 1,700 ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಮನೆಯಲ್ಲಿಯೇ ಕ್ವಾರೆಂಟೈನ್‍ನಲ್ಲಿ ಇರುವಂತೆ ತಿಳಿಸಲಾಗಿದೆ ಮತ್ತು ಎಲ್ಲರಿಗೂ ಸಂಪೂರ್ಣ ಲಸಿಕೆ ನೀಡಲಾಗಿದೆ. ಕ್ಯಾಂಪಸ್ ಮತ್ತು ಹಾಸ್ಟೆಲ್‍ಗಳನ್ನು ಸಂಪೂರ್ಣ ಸ್ಯಾನಿಟೈಸ್‍ಗೊಳಿಸಿದ ನಂತರವಷ್ಟೇ ಕಾಲೇಜನ್ನು ಪುನರಾಂಭಿಸಲಾಗುತ್ತದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ
Advertisement