ನವದೆಹಲಿ: ಕೊರೊನಾ ಮಹಾಮಾರಿ ಅವಾಂತರದಿಂದಾಗಿ ದೇಶ ಮಾತ್ರವಲ್ಲ ವಿಶ್ವದ ಆರ್ಥಿಕತೆಯೇ ಅಲ್ಲೋಲಕಲ್ಲೋಲವಾಗಿದ್ದು, ಬೃಹತ್ ಕಂಪನಿಗಳು ಸಹ ನಷ್ಟ ಅನುಭವಿಸುತ್ತಿವೆ. ಇದರ ಭಾಗವಾಗಿ ಆ್ಯಪ್ ಆಧರಿತ ಟ್ಯಾಕ್ಸಿ ಕಂಪನಿ ಊಬರ್ 3,700 ಫುಲ್ ಟೈಮ್ ಉದ್ಯೋಗಿಗಳನ್ನು ಕಡಿತಗೊಳಿಸಿದೆ.
Advertisement
ಈ ಕುರಿತು ಕಂಪನಿ ಬುಧವಾರ ಸ್ಪಷ್ಟಪಡಿಸಿದ್ದು, 3,700 ಫುಲ್ ಟೈಮ್ ಉದ್ಯೋಗಿಗಳನ್ನು ಕಡಿತಗೊಳಿಸಿದ್ದು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಾರಾ ಖೋಸ್ರೋಶಾಹಿ ಅವರು ಈ ವರ್ಷದ ಉಳಿದ ಎಲ್ಲ ತಿಂಗಳುಗಳ ಮೂಲ ವೇತನವನ್ನು ತ್ಯಜಿಸುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
Advertisement
ಊಬರ್ ಹಾಗೂ ಪ್ರತಿಸ್ಪರ್ಧಿ ಲಿಫ್ಟ್ ಲಾಭ ತೋರಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ಇಂತಹ ಹೊತ್ತಿನಲ್ಲೇ ಕೊರೊನಾ ಗಂಡಾಂತರ ಎದುರಾಗಿದೆ. ಲಾಕ್‍ಡೌನ್‍ನಿಂದಾಗಿ ಕಂಪನಿಯ ಆರ್ಥಿಕ ಲೆಕ್ಕಾಚಾರಗಳೆಲ್ಲ ಬುಡಮೇಲಾಗಿದ್ದು, ಆ್ಯಪ್ ಆಧಾರಿತ ಪ್ರಯಾಣದ ಬೇಡಿಕೆ ಪ್ರಪಂಚದಾದ್ಯಂತ ತೀವ್ರವಾಗಿ ಕುಸಿದಿದೆ. ಹೀಗಾಗಿ ಬಹುತೇಕ ಟ್ರಾವೆಲ್ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ.
Advertisement
Advertisement
ಉದ್ಯೋಗಿಗಳನ್ನು ತೆಗೆದು ಹಾಕುತ್ತಿರುವುದು ಕಂಪನಿಯ ಶೇ.17ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಕಸ್ಟಮರ್ ಸಪೋರ್ಟ್ ಹಾಗೂ ನೇಮಕಾತಿ ತಂಡ ಸೇರಿದಂತೆ ಹಲವು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು, ಇದರಿಂದಾಗಿ 20 ಮಿಲಿಯನ್ ಡಾಲರ್ (152 ಕೋಟಿ ರೂ.) ಖರ್ಚು ಕಡಿಮೆಯಾಗಲಿದೆ ಎಂದು ಕಂಪನಿ ಅಂದಾಜಿಸಿದೆ. ಹೀಗಾಗಿ ಮುಲಾಜಿಲ್ಲದೆ ತನ್ನ ಉದ್ಯೋಗಿಗಳನ್ನು ತೆಗೆಯುತ್ತಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಲಿಫ್ಟ್ ಕಂಪನಿ ಸಹ ತನ್ನ 982 ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು, ಉನ್ನತ ಅಧಿಕಾರಿಗಳ ಮೂಲ ವೇತನವನ್ನು ಕಡಿತಗೊಳಿಸಲು ನಿರ್ಧರಿಸಿದೆ.