ತುಮಕೂರು: ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು, ಹಾಗಿದ್ದರೂ ಕೆಲವರು ಬೀದಿಗಿಳಿದಿದ್ದಾರೆ. ಹೀಗೆ ಓಡಾಡುತ್ತಿದ್ದ ಯುವಕರಿಗೆ ಪೊಲೀಸರು ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ.
ಕುಣಿಗಲ್ ಪೊಲೀಸರು 7 ಜನ ಯುವಕರ ತಂಡಕ್ಕೆ ಈ ರೀತಿ ಶಿಕ್ಷೆ ನೀಡಿದ್ದು, ಬಸ್ಕಿ ಹೊಡೆಸಿಯೇ ಬಿಟ್ಟಿದ್ದಾರೆ. ಈ ಯುವಕರು ಕುಣಿಗಲ್ ಪಟ್ಟಣದಲ್ಲಿ ಬೈಕಲ್ಲಿ ಓಡಾಡುತ್ತಿದ್ದರು. ಅಲ್ಲದೇ ಬೇಜವಾಬ್ದಾರಿಯಾಗಿ ವರ್ತಿಸುತಿದ್ದರು. ಹೀಗಾಗಿ ನಡು ರಸ್ತೆಯಲ್ಲೇ 7 ಜನ ಯುವಕರಿಗೆ ಪೊಲೀಸರು ಬಸ್ಕಿ ಹೊಡೆಸಿದ್ದಾರೆ.
Advertisement
Advertisement
ಕನಿಷ್ಠ 15 ದಿನ ಹೊರ ಬರಬೇಡಿ:
ಲಾಕ್‍ಡೌನ್ ಹಿನ್ನೆಲೆ ಸಿದ್ದಗಂಗಾ ಮಠಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಎರಡೂ ಮುಖ್ಯ ದ್ವಾರಗಳನ್ನು ಬಂದ್ ಮಾಡಲಾಗಿದೆ. ಮಠದಲ್ಲಿರುವ ಒಂದೂವರೆ ಸಾವಿರ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಇಡೀ ಮಠ ಸಂಪೂರ್ಣ ಖಾಲಿ ಖಾಲಿಯಾಗಿದೆ. ಈ ಲಾಕ್‍ಡೌನ್ ಆದೇಶವನ್ನು ಕಡ್ಡಾಯವಾಗಿ ಪಾಲಿಸಿ, 15 ದಿನಗಳ ಕಾಲ ಮನೆಯಿಂದ ಯಾರೂ ಹೊರ ಬರಬೇಡಿ ಎಂದು ಸಿದ್ದಗಂಗಾ ಶ್ರೀಗಳು ಮನವಿ ಮಾಡಿದ್ದಾರೆ.