ಚಾಮರಾಜನಗರ: ಕೊರೊನಾ ತುರ್ತು ಪರಿಸ್ಥಿತಿ ಹಿನ್ನೆಲೆ ಮುಂದಿನ ಜೀವನ ನಿರ್ವಹಣೆಗೆ ಹೇಗೆ ಎಂದು ಕಂಗಾಲಾಗಿರುವ ಗಿರಿಜನ ಹಾಡಿಗಳ ಜನರಿಗೆ ಜಿಲ್ಲೆಯ ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪದ ಟಿಬೇಟಿಯನ್ ಸೆಟ್ಲೆಮೆಂಟ್ ಯೂನಿಯನ್ ಸಿಬ್ಬಂದಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
Advertisement
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶವನ್ನೇ ಲಾಕ್‍ಡೌನ ಮಾಡಿದೆ. ಇದರಿಂದ ದಿನಗೂಲಿ ಕಾರ್ಮಿಕರಿಗೆ ಜೀವನ ನಡೆಸುವುದು ಕಷ್ಟಕರವಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಪರಿಸ್ಥಿತಿ ಅರಿತ ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪದ ಟಿಬೇಟಿಯನ್ ಸೆಟ್ಲೆಮೆಂಟ್ ಯೂನಿಯನ್ ಸಿಬ್ಬಂದಿ ಹಾಗೂ ಟಿಬೇಟಿಯನ್ನರು ಸ್ವಯಂ ಪ್ರೇರಿತರಾಗಿ ಹಳ್ಳಿಗಳಲ್ಲಿ ದೇಣಿಗೆ ಸಂಗ್ರಹಿಸಿ ಗಿರಿ ಜನರಿಗೆ ಸಹಾಯ ಮಾಡಿದ್ದಾರೆ.
Advertisement
Advertisement
ತಾಲೂಕಿನ ಗಿರಿಜನ ಹಾಡಿಗಳಾದ ಹಾವಿನಮೂಳೆ, ಮಾವತ್ತೂರು, ಯರಗಬಾಳು, ಉದ್ದಟಿ, ಜಿರಿಗಿಗದ್ದೆ, ಹಿರಿಯಂಬಲಬ ಹಾಗೂ ಕತ್ತೆಕಾಲು ಪೋಡುಗಳ ಗಿರಿಜನರಿಗೆ ಆಹಾರ ಪದಾರ್ಥ ವಿತರಿಸಿದ್ದಾರೆ. ಸುಮಾರು 500 ಸೋಲಿಗ ಕುಟುಂಬಗಳಿಗೆ 2 ಕೆ.ಜಿ ರಾಗಿ, ಬೆಲ್ಲ, ಎಣ್ಣೆ, ಬಿಸ್ಕೆಟ್, ಚಹಾ ಪುಡಿ ಸೇರಿದಂತೆ ಇನ್ನಿತರೆ ಆಹಾರ ಪದಾರ್ಥಗಳ ಕಿಟ್ ವಿತರಿಸುವ ಮೂಲಕ ಗಿರಿಜನ ಹಾಡಿಗಳ ಜನರಿಗೆ ಆಸರೆಯಾಗಿದ್ದಾರೆ.