ಚಿಕ್ಕಬಳ್ಳಾಪುರ: ಕೊರೊನಾ ಹರಡುವುದನ್ನು ತಡೆಗಟ್ಟಲು ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೆ ಸಾರ್ವಜನಿಕರ ಜೀವ ಕಾಪಾಡಲು ಪಣತೊಟ್ಟು ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಚಿಕ್ಕಬಳ್ಳಾಪುರ ಮಂದಿ ಹೂ ಮೆಳೆ ಸುರಿಸಿ ಧನ್ಯವಾದ ಹೇಳಿದ್ದಾರೆ.
Advertisement
ದೇಶದಲ್ಲಿ ದಿನದಿಂದ ದಿನಕ್ಕೆ ಕೊರಾನಾ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ. ಇತ್ತ ಲಾಕ್‍ಡೌನ್ ಆಗಿದ್ದರೂ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಹಗಲು ರಾತ್ರಿ ಸಾರ್ವಜನಿಕರಿಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲೂ ಸಹ ಪೊಲೀಸರ ಕರ್ತವ್ಯ ಮೆಚ್ಚಿದ ಜನರು ಪೊಲೀಸ್ ಸಿಬ್ಬಂದಿ ಮೇಲೆ ಹೂ ಮಳೆ ಸುರಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿ ಎಸ್‍ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಜನ ಅನಗತ್ಯವಾಗಿ ಹೊರಬರದಂತೆ ಸೂಚನೆ ನೀಡುತ್ತಾ ನಗರದ ಪ್ರಮುಖ ರಸ್ತೆಗಳು ಹಾಗೂ ಗಲ್ಲಿ ಗಲ್ಲಿಗಳಿಗೆ ತೆರಳಿ ಪಥಸಂಚಲನ ನಡೆಸಿದರು.
Advertisement
Advertisement
ಈ ವೇಳೆ ನಗರದ ದರ್ಹಾ ಮೊಹಲ್ಲಾ ರಸ್ತೆಯಲ್ಲಿ ಜನ ಮನೆಯಿಂದ ಹೊರ ಬಂದು, ಪಥ ಸಂಚಲನ ನಡೆಸುತ್ತಿದ್ದ ಪೊಲೀಸರ ಮೇಲೆ ಹೂ ಮಳೆ ಸುರಿಸಿ ಸ್ವಾಗತಿಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಸಲಾಂ ಹೊಡೆದ ಜನ ಕೊರಾನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಿದ್ದಾರೆ.