– ಸಾಮಾಜಿಕ ಅಂತರ ಕಾಯಲು ಪ್ಲಾನ್
– ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ
ಹಾಸನ: ಕೊರೊನಾ ಭೀತಿ ಹೆಚ್ಚಾದ ಬೆನ್ನಲ್ಲೇ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ ಜನ ಮಾತ್ರ ಅಗತ್ಯ ವಸ್ತುಗಳನ್ನು ಕೊಳ್ಳಲು ಹೋದಾಗ ಯಾವುದೇ ಅಂತರ ಕಾಯ್ದುಕೊಳ್ಳದೆ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ. ಇದಕ್ಕೆ ಹಾಸನ ಪೊಲೀಸರು ಉಪಾಯ ಹುಡುಕಿದ್ದಾರೆ.
ಜನ ಅಂಗಡಿಗೆ ಹೋದಾಗಲೂ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಹಾಸನ ಪೊಲೀಸರು ವಿನೂತನ ಕ್ರಮ ಕೈಗೊಂಡಿದ್ದಾರೆ. ಹಾಲಿನ ಅಂಗಡಿ, ಮೆಡಿಕಲ್ ಶಾಪ್‍ಗಳ ಮುಂದೆ ಪೇಟಿಂಗ್‍ನಲ್ಲಿ ಸರತಿ ಸಾಲಿನಲ್ಲಿ ಬರುವಂತೆ ಲೈನ್ ಹಾಕಿಸಲಾಗಿದೆ. ಹೀಗೆ ಸರತಿ ಸಾಲಿನಲ್ಲಿ ಬರುವವರು ಎಷ್ಟು ಅಂತರದಲ್ಲಿ ನಿಲ್ಲಬೇಕು ಎಂದು ಅಡ್ಡಗೆರೆ ಕೂಡ ಬರೆಸಿದ್ದಾರೆ.
Advertisement
Advertisement
ಮಂಡ್ಯ ಎಸ್‍ಪಿ ಶ್ರೀನಿವಾಸ್ ಗೌಡ ಸೂಚನೆ ಮೇರೆಗೆ ಹಾಸನ ಪೊಲೀಸರು ಸ್ವತಃ ತಾವೇ ಮುಂದೆ ನಿಂತು ಜನರ ಸುರಕ್ಷತೆಗಾಗಿ ಸರಕ್ಷಾ ಗೆರೆ ಎಳೆಸುತ್ತಿದ್ದಾರೆ. ಪೊಲೀಸರ ಕಾರ್ಯವನ್ನು ಹಾಸನ ಜಿಲ್ಲೆಯ ಜನರು ಶ್ಲಾಘಿಸಿದ್ದಾರೆ.