ಚಿಕ್ಕಮಗಳೂರು: ಕೊರೊನಾ ಆತಂಕದಲ್ಲಿ ದೇಶವೇ ಲಾಕ್‍ಡೌನ್ ಆಗಿದ್ದು, ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಇಂತಹವರಿಗೆ ಪಾಸ್ ವಿತರಿಸಿದೆ. ಆದರೆ ಇದೇ ಪಾಸ್‍ಗಳನ್ನು ನಕಲಿ ಮಾಡಿ ಮಾರುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಸರ್ಕಾರದ ಪಾಸ್‍ಗಳನ್ನೇ ನಕಲಿ ಮಾಡಿ ಅಪ್ರಾಪ್ತ ವಯಸ್ಕನೊಬ್ಬ ಮಾರಿದ್ದಾನೆ. ಲಾಕ್‍ಡೌನ್ ವೇಳೆ ಸಂಚರಿಸಲು ಪಾಸ್ ಪಡೆಯಬೇಕು ಎಂದು ನಕಲಿ ಪಾಸ್ ಮಾರುತ್ತಿದ್ದ ಎನ್ನಲಾಗಿದೆ. ಅಪ್ರಾಪ್ತನ ಈ ಕೆಲಸಕ್ಕೆ ಆತನ ತಾಯಿಯ ಬೆಂಬಲವೂ ಇದೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ನೂರಾರು ಪಾಸ್‍ಗಳನ್ನು ಮಾರಿರುವ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಈತನಿಂದ ಪಾಸ್ ಖರೀದಿಸಿದ್ದ ಮತ್ತೋರ್ವ ಗ್ರಾಹಕನನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಕಲಿ ಪಾಸ್ ಮಾಡಿ ಮನಸೋ ಇಚ್ಛೆ ಮಾರಿರುವ ಈತ, ಒಂದು ಪಾಸ್‍ಗೆ 500 ರಿಂದ 1000 ರೂಪಾಯಿವರೆಗೂ ಹಣ ಪೀಕಿದ್ದಾನೆ. ಇದೀಗ ನಕಲಿ ಪಾಸ್ ಮಾರಿದವನು ಹಾಗೂ ಆತನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.