ಲಾಕ್ ಡೌನ್ ಉಲ್ಲಂಘಿಸಿ ಹ್ಯಾಂಡ್ ಬಾಲ್ ಆಟ – 17 ಯುವಕರ ಮೇಲೆ ಪ್ರಕರಣ ದಾಖಲು

Public TV
1 Min Read
ckd police

ಬೆಳಗಾವಿ(ಚಿಕ್ಕೋಡಿ): ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಆದರೆ ಸರ್ಕಾರದ ಆದೇಶ ಉಲಂಘಿಸಿ ಸಾರ್ವಜನಿಕವಾಗಿ ಹ್ಯಾಂಡ್ ಬಾಲ್ ಆಟವಾಡುತ್ತಿದ್ದ 17 ಯುವಕರ ಮೇಲೆ ಪ್ರಕರಣ ದಾಖಲಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಶುಕ್ರವಾರ ತಡರಾತ್ರಿ 10 ಗಂಟೆಗೆ ಪಟ್ಟಣದ ಮಠ ಗಲ್ಲಿಯಲ್ಲಿ ಯುವಕರು ಹ್ಯಾಂಡ್ ಬಾಲ್ ಆಟವಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರನ್ನು ಕಂಡು ಯುವಕರು ಪರಾರಿಯಾಗಿದ್ದರು. ಸ್ಥಳೀಯರ ಸಹಾಯದಿಂದ ಆಟವಾಡುತ್ತಿದ್ದ ಸಂದೀಪ್ ಬಾಂಬರೆ, ಬಾಳು ಪಡಕೆ, ಕಿರಣ್ ಸಾರವಾಡೆ, ಸೂರಜ್ ಜಾಧವ, ಜಯಪ್ರಕಾಶ್ ಕದಂ, ರವಿ ಭಿಮರಾವ್ ಕೇಸರಕರ್, ಅಕ್ಷಯ್ ಮಹಾದೇವ ಕೇಸರಕರ್, ಕುಮಾರ್ ಶಂಕರ ಪಡಕೆ, ಕಿರಣ್ ಅರ್ಜುನ್ ಜಾಧವ, ಮಹೇಶ್ ಕೋನಕೇರಿ, ಪಿಂಟು ಸಾರವಾಡಿ, ಅನಿಲ್ ಸಾವಂತ, ಬಸು ಬೋಳಶ್ಯಾನಟ್ಟಿ, ಅಮೂಲ್ ದಳವಿ, ಅಮೂಲ್ ಹೆಬ್ಳಿಕರ, ತೌಫಿಕ್ ದಸ್ತಗೀರ ಹವಾಲ್ದಾರ್ ಮೇಲೆ ಐಪಿಸಿ ಸೆಕ್ಷನ್ 188, 270 ಅಡಿ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ckd police 1

17 ಜನರಲ್ಲಿ ಐದು ಜನರನ್ನು ಬಂಧಿಸಲಾಗಿದ್ದು, ಇನ್ನುಳಿದವರ ಬಂಧನಕ್ಕೆ ಪೊಲೀಸರ ಕಾರ್ಯಚರಣೆ ನಡೆಸಿದ್ದಾರೆ. ಪಿಎಸ್‍ಐ ಗಣಪತಿ ಕೊಗನೋಳಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಿ.ಕೆ.ನಾಗನೂರಿ, ರಮೇಶ್ ರಾಜಾಪೂರಿ, ಬಸವರಾಜ್ ಕಪರಟ್ಟಿ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *