ಬೆಂಗಳೂರು: 9 ಜಿಲ್ಲೆಗಳಿಗೆ ವಿಧಿಸಲಾಗಿದ್ದು ಕರ್ಫ್ಯೂ ಮಾದರಿಯ ಲಾಕ್‍ಡೌನ್ ನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗಿದೆ. ಈ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ನಾಡಿನ ಜನತೆಗೆ ಮಾಹಿತಿ ನೀಡಿದ್ದಾರೆ.
ಟ್ವೀಟ್: ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ #ಕೋವಿಡ್_19 ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ 9 ಜಿಲ್ಲೆಗಳಿಗೆ ಅನ್ವಯಿಸಿ 24/03/2020 ರಿಂದ 31/03/2020 ರವರೆಗೆ ಹೊರಡಿಸಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ.
ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ #ಕೋವಿಡ್_19 ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ 9 ಜಿಲ್ಲೆಗಳಿಗೆ ಅನ್ವಯಿಸಿ 24 /03 /2020 ರಿಂದ 31 /03/2020 ರವರೆಗೆ ಹೊರಡಿಸಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನು
ರಾಜ್ಯಾದ್ಯಂತ ವಿಸ್ತರಿಸಲಾಗಿದೆ .
ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ.
— CM of Karnataka (@CMofKarnataka) March 23, 2020
ಇಂದು ಒಂದೇ ದಿನ ಕರ್ನಾಟಕದಲ್ಲಿ ಏಳು ಕೊರೊನಾ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಆತಂಕಕ್ಕೊಳಗಾಗಿದ್ದರು. ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕೊರೊನಾಗೆ 10 ಜನ ಸಾವನ್ನಪ್ಪಿದ್ದಾರೆ.
ಅತ್ಯಾವಶ್ಯಕ ವಸ್ತುಗಳ ವ್ಯಾಪ್ತಿಗೆ ಬರದ ಎಲ್ಲ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ವರ್ಕ್‍ಶಾಪ್, ಗೋಡಾನ್ ಇತ್ಯಾದಿಗಳು ತಮ್ಮ ವಹಿವಾಟುಗಳನ್ನು ಮುಚ್ಚಬೇಕು. ಈ ಲಾಕ್‍ಡೌನ್ ನಿಯಮ ಆಹಾರ, ಕಿರಾಣಿ ಸಾಮಾಗ್ರಿಗಳು, ಹಾಲು, ತರಕಾರಿ, ಬ್ಯಾಂಕಿಂಗ್ ಮುಂತಾದ ವಹಿವಾಟುಗಳನ್ನು ನಿರ್ವಹಿಸುವ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ.
ಇಡೀ ರಾಜ್ಯದಲ್ಲಿ ಕೊರೊನಾ ಕರ್ಪ್ಯೂ- 24 /03 /2020 ರಿಂದ 31 /03/2020 ರವರೆಗೆ ಹೊರಡಿಸಿದ್ದ ಸಂಪೂರ್ಣ ಲಾಕ್ ಡೌನ್ ಆದೇಶ ರಾಜ್ಯಾದ್ಯಂತ ವಿಸ್ತರಣೆ#Karnataka #CoronaVirus #CoronaVirusInKarnataka #COVID19 pic.twitter.com/YwHHAIKsIm
— PublicTV (@publictvnews) March 23, 2020
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಕ್ರಮಗಳನ್ನು ಕಟ್ಟುನಿಟ್ಟಿನಿ0ದ ಜಾರಿಗೆ ತರುವ ದೃಷ್ಟಿಯಿಂದ ಹೆಚ್ಚು ಕಾರ್ಮಿಕ ಬಲವನ್ನು ಹೊಂದಿರುವ ಸಂಸ್ಥೆಗಳು ತಮ್ಮ ಕಾರ್ಮಿಕ ಬಲವನ್ನು ರೊಟೇಷನ್ ಆಧಾರದಲ್ಲಿ ಶೇ.50ಕ್ಕೆ ಇಳಿಸಬೇಕು. ಆದರೆ ಈ ಕಾರಣಕ್ಕಾಗಿ ಯಾರನ್ನೂ ಕೆಲಸದಿಂದ ತೆಗೆಯುವಂತಿಲ್ಲ. ಉಳಿದ ಕಾರ್ಮಿಕರಿಗೆ ಈ ದಿನಗಳ ಪಾವತಿ ಮೇಲಿನ ರಜೆಯನ್ನು ಮಂಜೂರು ಮಾಡಬೇಕು.
ಅಗತ್ಯ ಸೇವೆಗಳನ್ನು ನಿರ್ವಹಿಸುವ ಘಟಕಗಳನ್ನು ಹೊರತುಪಡಿಸಿ ಎಲ್ಲ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆಗಳು ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು.
ಎಲ್ಲ ಹವಾನಿಯಂತ್ರಿತ ಬಸ್ಸುಗಳ ಸೇವೆಯನ್ನು ನಿಲ್ಲಿಸಲಾಗಿದೆ. ಇದರ ಜೊತೆಗೆ ಕೇವಲ ಅಗತ್ಯವಿರುವಷ್ಟು ಬಸ್ಸುಗಳನ್ನು ಮಾತ್ರ ಕಾರ್ಯಾಚರಣೆಗೆ ಇಳಿಸಬೇಕು ಎಂದು ಸಾರಿಗೆ ಇಲಾಖೆಗೆ ಸೂಚಿಸಲಾಗಿದೆ.
ಅವಶ್ಯಕ ಸೇವೆಗಳು ಯಾವವು?
– ಆಹಾರ, ಕಿರಾಣಿ, ಹಾಲು, ತರಕಾರಿ, ಮಾ0ಸ, ಮೀನು, ಅಂಗಡಿಗಳು, ಔಷಧಿ ಹಾಗೂ ಪೆಟ್ರೋಲ್ ಪಂಪ್‍ಗಳು.
– ಎಲ್ಲ ಸರಕುಗಳ ಸಾಗಣಿ
– ಪೊಲೀಸ್ ಮತ್ತು ಅಗ್ನಿಶಾಮಕ ಸೇವೆ
– ಸರ್ಕಾರಿ ಕಚೇರಿಗಳು, ಯು.ಎಲ್.ಬಿ.ಗಳು. ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಅಂಚೆ ಸೇವೆಗಳು.
– ವಿದ್ಯುಚ್ಚಕ್ತಿ, ನೀರು ಮತ್ತು ನಗರಪಾಲಿಕೆ ಸೇವೆಗಳು
– ಬ್ಯಾಂಕ್, ಎಟಿಎಂ, ಟೆಲಿಕಾಂ
– ಆಹಾರ, ಔಷಧಿ, ವೈದ್ಯಕೀಯ ಸಲಕರಣೆಗಳ ಹೋಮ್ ಡೆಲಿವರಿ
– ರೆಸ್ಟೋರೆಂಟ್ ನಿಂದ ಪಾರ್ಸೆಲ್ ಪಡೆಯುವುದು.
– ಕೃಷಿ ಸಂಬಂಧಿ ಚಟುವಟಿಕೆಗಳು
– ಕೃಷಿ, ರೇಷ್ಮೆ ಕೃಷಿ, ತೋಟಗಾರಿಕೆ, ಪಶು ಸ0ಗೋಪನೆ, ಮೀನುಗಾರಿಕೆ ಸಂಬಂಧಿಸಿದ ಅಂಗಡಿಗಳು ಮತ್ತು ಮಾರುಕಟ್ಟೆಗಳು.
– ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ನೀಡಲಾಗುವ ಕ್ಯಾಂಟೀನ್ ಸೇವೆಗಳು
ಜನರಿಗೆ ಅನಗತ್ಯ ತೊಂದರೆಗಳು ಉಂಟಾದರೆ ಈ ಷರತ್ತುಗಳನ್ನು ಸಡಿಲಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
– ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರೈಲು ಸೇವೆಗಳನ್ನು ಮಾರ್ಚ್ 31ರ ವರೆಗೆ ಸ್ಥಗಿತಗೊಳಿಸಲಾಗಿದೆ.
– ಮಾರ್ಚ್ 12ರಂದು ಸಂಜೆ 7.30ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಮಿರ್ ಮುಖ್ತಿಯಾರ್ ಆಲಿ ಅವರ ಸಂಗೀತ ಕಾರ್ಯಕ್ರಮಕ್ಕೆ ಕೊರೊನಾ ಸೋಂಕಿತ ವ್ಯಕ್ತಿ (623) ಪಾಲ್ಗೊಂಡಿದ್ದರೆಂದು ತಿಳಿದುಬ0ದಿದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಪ್ರೇಕ್ಷಕರು 104, 080-46848600 ಅಥವಾ 080- 66692000 ಸಹಾಯವಾಣಿಗೆ ಕರೆ ಮಾಡಿ ಸ್ವಯಂ ಪ್ರೇರಣೆಯಿಂದ ವರದಿ ಮಾಡಿಕೊಳ್ಳಲು ಕೋರಲಾಗಿದೆ.
– ಎಲ್ಲ ಹಣಕಾಸಿನ ಅವಶ್ಯಕತೆಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಲಭ್ಯವಿರುವ ಎಸ್.ಡಿ.ಆರ್.ಎಫ್. ನಿಧಿಯಿಂದ ಪಡೆಯಬಹುದಾಗಿದೆ.
ಕೊರೊನಾ ರೋಗ ಪೀಡಿತರಿಗೆ ಮತ್ತು ಮನೆ ಹಾಗೂ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರುವ ವ್ಯಕ್ತಿಗಳಿಗೆ ಮಾನಸಿಕ ಆರೋಗ್ಯ ಸಮಾಲೋಚನೆ ನಡೆಸಲಾಗುತ್ತಿದೆ. ಒಟ್ಟು 6,013 ಕೌನ್ಸಿಲಿಂಗ್ ಸೆಷನ್ಸ್‍ಗಳನ್ನು ಇಲ್ಲಿಯವರೆಗೆ ನಡೆಸಲಾಗಿದೆ.
– ಮಾರ್ಚ್ 17ರ ಮೊದಲು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಾಗರೋತ್ತರ ಪ್ರಯಾಣಿಕರನ್ನು ಗುರುತಿಸುವ ಮಹತ್ತರವಾದ ಕಾರ್ಯವನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ ಮಾಚ್ 22ರಂದು 5000 ಜನರನ್ನು ಗುರುತಿಸಿ ಮುದ್ರೆ ಒತ್ತಲಾಗಿದೆ.
– 104 ಆರೋಗ್ಯ ಸಹಾಯವಾಣಿ (ಶುಲ್ಕರಹಿತ ಕಾಲ್ ಸೆ0ಟರ್) ಕೊರೊನಾ ವೈರಸ್ ಕುರಿತ ಕರೆಗಳಿಗೆ 210 ಆಸನಗಳನ್ನು ಮೀಸಲಿರಿಸಿದೆ. ಮಾ.22ರಂದು 23,338 ಕರೆಗಳನ್ನು ಸ್ವೀಕರಿಸಲಾಗಿದೆ ಮತ್ತು 979 ಅಗತ್ಯ ಮಾರ್ಗದರ್ಶನದ ನೀಡುವ ಕರೆಗಳನ್ನು ಸೇರಿ ಒಟ್ಟು 47,277 ಹೊರ ಕರೆಗಳನ್ನು ಮಾಡಲಾಗಿದೆ.
ಸಾರ್ವಜನಿಕರಿಗೆ ಮನವಿ: ಕೊರೊನಾ ಪೀಡಿತ ದೇಶಗಳಿಂದ ಹಿಂತಿರುಗಿರುವ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವ ಯಾರಾದರೂ ಭಾರತಕ್ಕೆ ಹಿಂತಿರುಗಿದ ದಿನದಿಂದ 14 ದಿನಗಳವರೆಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳುವುದು ಅಥವಾ 104 ಸಹಾಯವಾಣಿಗೆ ಕರೆ ಮಾಡಬೇಕು. ರೋಗ ಲಕ್ಷಣಗಳು ಇರಲಿ, ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರುವುದು ಹಾಗೂ ಹತ್ತಿರದ ಆಸ್ಪತ್ರೆಯಲ್ಲಿ ಚೆಕ್ ಮಾಡಿಸಿಕೊಳ್ಳುವುದನ್ನು ಮಾಡಬೇಕು. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ, ಟಿಶ್ಯೂ ಪೇಪರನ್ನು ಬಳಸಿ, ಕೈ ಸ್ವಚ್ಛಗೊಳಿಸುವ ದ್ರಾವಣ ಅಥವಾ ನೀರು ಮತ್ತು ಸೋಪು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಿ ಮತ್ತು ಸಾಮಾಜಿಕ ಸಮೂಹ ಗುಂಪು ಸೇರಬೇಡಿ.