– ಮಹಾರಾಷ್ಟ್ರ ಸಿಎಂ ಮನೆಯ ಪೇದೆಗಳಿಗೂ ಸೋಂಕು
– ವಿಶ್ವದಲ್ಲಿ ಕೊರೊನಾಗೆ 2.40 ಲಕ್ಷ ಮಂದಿ ಬಲಿ
ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇವತ್ತು ಒಂದೇ ದಿನ 2,411 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು 37,776 ಜನರಿಗೆ ಕೊರೊನಾ ವೈರಸ್ ತಗುಲಿದೆ. 1,223ಜನ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 1,008 ಕೇಸ್ ಪತ್ತೆಯಾಗಿದ್ದು, ಬಾಧಿತರ ಸಂಖ್ಯೆ 11 ಸಾವಿರ ದಾಟಿದೆ. ಮುಂಬೈಯೊಂದರಲ್ಲೇ ಸುಮಾರು 8 ಸಾವಿರ ಸೋಂಕಿತರು ಇದ್ದಾರೆ. ಪೂರ್ವ ದೆಹಲಿಯ ಬೆಟಾಲಿಯನ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ 68 ಮಂದಿ ಸಿಆರ್‍ಪಿಎಫ್ ಯೋಧರಿಗೆ ಕೊರೊನಾ ದೃಢವಾಗಿದ್ದು, ಈ ಮೂಲಕ ಇದೇ ಬೆಟಾಲಿಯನ್‍ನ 122 ಮಂದಿ ಸಿಆರ್‍ಪಿಎಫ್ ಯೋಧರಿಗೆ ಸೋಂಕು ವ್ಯಾಪಿಸಿದೆ. ಸದ್ಯ 1,100 ಯೋಧರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ.
Advertisement
Advertisement
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನೆಯ ಮೂವರು ಪೇದೆಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. 130 ಸೆಕ್ಯೂರಿಟಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ನಾಳೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿ ಕೊರೊನಾ ಆಸ್ಪತ್ರೆಗಳ ವಾರಿಯರ್ಸ್ ಮೇಲೆ ಭಾರತೀಯ ಸೇನೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ ಮಾಡಿ ಧನ್ಯವಾದ ಹೇಳಲಿದೆ. ನೌಕಾಪಡೆಯ ಹಡಗುಗಳಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ.
Advertisement
ವಿಶ್ವದಲ್ಲಿ ಮಹಾಮಾರಿ ಕೊರೊನಾಗೆ 2.40 ಲಕ್ಷ ಮಂದಿ ಬಲಿಯಾಗಿದ್ದಾರೆ. 34 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 11 ಲಕ್ಷದಷ್ಟು ಜನ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಅಮೆರಿಕದಲ್ಲಿ 66 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. 11.34 ಲಕ್ಷ ಮಂದಿ ಸೋಂಕಿತರಿದ್ದಾರೆ. ವಿಶ್ವದಲ್ಲೇ ಅಮೆರಿಕ ಕೊರೊನಾ ಸಾವಿನ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ. ಸ್ಪೇನ್‍ನಲ್ಲಿ ಸಾವಿನ ಸಂಖ್ಯೆ 25 ಸಾವಿರ ಗಡಿ ಮುಟ್ಟುತ್ತಿದೆ. 2 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಿದ್ದಾರೆ. ಇಟಲಿ ಕೊರೊನಾ ಸಾವಿನ ಸಂಖ್ಯೆಯಲ್ಲಿ ಸ್ಪೇನ್ ರಾಷ್ಟ್ರವನ್ನೇ ಮೀರಿಸಿದೆ. 28 ಸಾವಿರ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಟಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 269 ಮಂದಿ ಸಾವನಪ್ಪಿದ್ದಾರೆ.
Advertisement
ಕೊರೊನಾ ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ರೆಮಿಡೆಸಿವರ್ ಲಸಿಕೆ ಪ್ರಯೋಗ ಮಾಡಬಹುದು ಅಂತ ಭಾರತೀಯ ಆಹಾರ ಮತ್ತು ಮಾದಕ ನಿಯಂತ್ರಕ ಸಂಸ್ಥೆ ಹೇಳಿದೆ. ಭಾರತೀಯ ಮತ್ತು ಅಮೆರಿಕ ವೈದ್ಯರ ನೇತೃತ್ವದ ತಂಡ ಲಸಿಕೆ ಬಗ್ಗೆ ಹಲವು ಪ್ರಯೋಗಗಳನ್ನ ನಡೆಸಿದೆ. ಕೊರೊನಾ ಸೋಂಕಿತ ಕೆಲವು ಪ್ರಕರಣಗಳು ವಾಸಿಯಾಗಲು ರೆಮಿಡೆಸಿವರ್ ಸಹಾಯ ಮಾಡಿದೆ ಅಂತಾ ಹೇಳಿದ್ದಾರೆ. ಅಮೆರಿಕದ ಹಲವು ಜಿಲ್ಲೆಗಳಲ್ಲಿ ಈ ಲಸಿಕೆಯನ್ನ ವ್ಯಾಪಕವಾಗಿ ಬಳಸಿರುವ ಉದಾಹರಣೆ ನೀಡಿದೆ.