ನವದೆಹಲಿ: ಮಾರ್ಚ್ 31 ರವರೆಗೆ ದೇಶಾದ್ಯಂತ ಸಂಚರಿಸುವ ಎಲ್ಲ ರೈಲು ಪ್ರಯಾಣಿಕರ ರೈಲು, ಮೆಟ್ರೋ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೊರೊನಾ ಪೀಡಿತರ ಸಂಖ್ಯೆ 350ರ ಗಡಿ ದಾಟುತ್ತಿದ್ದಂತೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಇಂದು ಬೆಳಗ್ಗೆ ರೈಲ್ವೇ ಬೋರ್ಡ್ ತುರ್ತು ಸಭೆ ಸೇರಿ ಈ ನಿರ್ಧಾರವನ್ನು ಕೈಗೊಂಡಿದೆ. ಪ್ರಯಾಣಿಕ ರೈಲು ಮಾತ್ರ ಸ್ಥಗಿತಗೊಂಡಿದ್ದು ಗೂಡ್ಸ್ ರೈಲುಗಳ ಸೇವೆ ಇರಲಿದೆ.
Advertisement
ಮಾರ್ಚ್ 12 ಮತ್ತು ಮಾರ್ಚ್ 16 ರಂದು ರೈಲಿನಲ್ಲಿ ಪ್ರಯಾಣಿಸಿದ ಒಟ್ಟು 16 ಮಂದಿ ಕೊರೊನಾ ಸೋಂಕು ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
Advertisement
ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿ ಈ ಮೊದಲು ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಮಧ್ಯರಾತ್ರಿಯವರೆಗೆ ಎಲ್ಲ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿತ್ತು. ಆದರೆ ಈಗ ಕೊರೊನಾ ಪೀಡಿತರ ಸಂಖ್ಯೆ ಭಾರೀ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೆ ಎಲ್ಲ ಪ್ರಯಾಣಿಕ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ.
Advertisement
ಇದರ ಜೊತೆ ಮೆಟ್ರೋ ರೈಲು ಮತ್ತು ಅಂತರ್ ರಾಜ್ಯ ಬಸ್ ಸಂಚಾರ ಸಹ ಸ್ಥಗಿತಗೊಳಿಸಲಾಗಿದೆ.