– ಎಣ್ಣೆ ಸಪ್ಲೈ ಮಾಡ್ಬೋದೇನೋ ಕುಡುಕ್ರೂ ಸ್ವಲ್ಪ ತಡ್ಕಳಿ
– ಕೊರೊನಾ ನಿಂಗೆ ಸದ್ಯದಲ್ಲೇ ಮಾಡ್ತೀವಿ ತಿಥಿನಾ
ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ ತಮ್ಮ ವಿಭಿನ್ನ ಶೈಲಿಯ ರ‍್ಯಾಪ್ ಸಾಂಗ್‍ಗಳ ಮೂಲಕ ಯುವ ಸಮುದಾಯಕ್ಕೆ ಹತ್ತಿರವಾಗಿದ್ದಾರೆ. ಕೊರೊನಾ ಬಗ್ಗೆ ದೇಶವನ್ನೇ ಸ್ತಬ್ಧವನ್ನಾಗಿಸಿದ್ದು, ಎಲ್ಲರೂ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಈ ಮಧ್ಯೆ ಹಾಡಿನ ಮೂಲಕ ಸಂಗೀತಗಾರರು ಜಾಗೃತಿ ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ಸಿನಿಮಾ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಬರೆದಿದ್ದ ಸಾಹಿತ್ಯಕ್ಕೆ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರು ಧ್ವನಿ ನೀಡಿದ್ದರು. ಇದೀಗ ಚಂದನ್ ಶೆಟ್ಟಿ ತಾವೇ ರಚಿಸಿದ ಹಾಡನ್ನು ಹೇಳಿದ್ದಾರೆ.
Advertisement
ಕೊರೊನಾ ಇಡೀ ದೇಶವನ್ನೇ ಹಿಂಡಿ ಹಿಪ್ಪೆ ಮಾಡುತ್ತಿದ್ದು, ದೇಶದ ಜನತೆ ಭಯಭೀತರಾಗಿದ್ದಾರೆ. ಹೀಗಾಗಿ ಎಲ್ಲೆಡೆ ಜಾಗೃತಿ ಹೆಚ್ಚಾಗುತ್ತಿದ್ದು, ಸಿನಿಮಾ ತಾರೆಯರಂತೂ ಟೊಂಕ ಕಟ್ಟಿ ನಿಂತಿದ್ದಾರೆ. ಎಲ್ಲರೂ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಮನೆಯಲ್ಲೇ ಇರಿ, ಆರೋಗ್ಯವಾಗಿರಿ ಎಂಬ ಸಂದೇಶವನ್ನು ನೀಡುತ್ತಿದ್ದಾರೆ. ಇದಕ್ಕೆ ತಕ್ಕಂತೆ ಸಂಗೀತಗಾರರು ಹಾಗೂ ಸಾಹಿತಿಗಳು ಸಹ ತಮ್ಮ ವಿಭಿನ್ನ ಶೈಲಿಯಲ್ಲಿ ಹಾಡು ರಚಿಸುವ ಮೂಲಕ ಜನರಿಗೆ ತಿಳಿ ಹೇಳುತ್ತಿದ್ದಾರೆ.
Advertisement
Advertisement
ರ‍್ಯಾಪರ್ ಚಂದನ್ ಶೆಟ್ಟಿ ಸಹ ತಮ್ಮ ಶೈಲಿಯಲ್ಲಿ ರ‍್ಯಾಪ್ ಗೀತೆಯನ್ನು ರಚಿಸಿದ್ದು, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಸೇರಿಕೊಂಡು ತಾವೇ ರಚಿಸಿದ ಹಾಡನ್ನು ಹೇಳಿದ್ದಾರೆ. ಇದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ರ‍್ಯಾಪ್ ಸಾಂಗ್ ಮೂಲಕ ಜನರಿಗೆ ತಿಳಿ ಹೇಳಿದ್ದಾರೆ. ಕೊರೊನಾ…ಕೊರೊನಾ….ಕೊರೊನಾ…..ನಿಂಗೆ ಸದ್ಯದಲ್ಲೇ ಮಾಡ್ತೀವಿ ತಿಥಿನಾ ಎಂಬ ಸಾಲುಗಳು ಯುವ ಸಮುದಾಯಕ್ಕೆ ಅಪ್ಯಾಯಮಾನವಾಗುತ್ತವೆ.
Advertisement
ಎಣ್ಣೆ ಸಪ್ಲೈ ಮಾಡ್ಬೋದೇನೋ ಕುಡುಕ್ರೂ ಸ್ವಲ್ಪ ತಡ್ಕಳಿ, ನಾವೆಲ್ಲಾ ಮನೆಲೇ ಇರೋಣ, ಮಿಸ್ ಆದರೆ ಡೈರೆಕ್ಟೂ ಸ್ಮಶಾನ ಎಂಬ ಸಾಲುಗಳು ಯುವಕರನ್ನು ಹೆಚ್ಚು ಸೆಳೆಯುತ್ತವೆ. ಇದರೊಂದಿಗೆ ಮಾಸ್ಕ್, ಗುಂಪು ಸೇರದಂತೆ ಕೇಳಿಕೊಂಡಿದ್ದಾರೆ. ಇದು ಮೇಡ್ ಇನ್ ಚೀನಾ ಎಂದು ಹರಿಹಾಯ್ದಿದ್ದಾರೆ.