ಬೆಂಗಳೂರು: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‍ಗೆ ಭಯದಿಂದ ನಾಳೆಯಿಂದ ಅಂದರೆ ಮಂಗಳವಾರದಿಂದ ಮಾರ್ಚ್ 31ರವರೆಗೂ ಎಲ್ಲ ಗಾರ್ಮೆಂಟ್ಸ್ ಕಂಪನಿಗಳು ಬಂದ್ ಆಗಲಿವೆ.
ನಾಳೆಯಿಂದ ಮಾಚ್9 31ರ ತನಕ ವ್ಯಾಪಾರ, ಕೈಗಾರಿಕೆ ಮತ್ತು ಸೇವಾ ವಲಯಗಳು, ಸಂಸ್ಥೆಗಳು ಸಂಪೂರ್ಣವಾಗಿ ಬಂದ್ ಆಗಲಿವೆ ಅಂತ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಸಿ.ಆರ್ ಜನಾರ್ಧನ್ ಸ್ಪಷ್ಟಪಡಿಸಿದ್ದಾರೆ.
Advertisement
ಬೆಂಗಳೂರಿನ ಎಫ್‍ಕೆಸಿಸಿಐನ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ 4 ಸಾವಿರ ಗಾರ್ಮೆಂಟ್ಸ್ ಹಾಗೂ ರಾಜ್ಯದ 10 ಸಾವಿರಕ್ಕೂ ಹೆಚ್ಚು ಗಾರ್ಮೆಂಟ್ಸ್‌ಗಳು ನಾಳೆಯಿಂದ ಬಂದ್ ಆಗಲಿವೆ. ಇನ್ನೂ ವೇತನ ಸಹಿತ ಕಾರ್ಮಿಕರಿಗೆ ರಜೆಯನ್ನ ನೀಡಲಾಗುತ್ತದೆ. ಆದೇಶ ಉಲ್ಲಂಘಿಸಿ ಗಾರ್ಮೆಂಟ್ಸ್ ಕಂಪನಿಗಳು ಓಪನ್ ಮಾಡಿದರೆ ಆಯಾ ಕಂಪನಿಗಳ ಲೈಸೆನ್ಸ್ ನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
Advertisement
ಬೆಂಗಳೂರಿನ ಸುಂಕದಕಟ್ಟೆ ಗಾರ್ಮೆಂಟ್ಸ್‌ನಲ್ಲಿ ಇವತ್ತು ಗಾರ್ಮೆಂಟ್ಸ್ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದರು. ರಜೆ ಸಹಿತ ವೇತನ ನೀಡಬೇಕು ಎಂದು ಸುಮಾರು 2 ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸಿದರು.
Advertisement