– ಕೊರೊನಾ ನಿಯಂತ್ರಣಕ್ಕೆ ಹರಸ ಸಾಹಸ ಪಡುತ್ತಿದೆ ಇಂಗ್ಲೆಂಡ್
– ಸುಳ್ಳು ಮಾಹಿತಿ ನೀಡಿದರೆ ಭಾರೀ ದಂಡ
ಲಂಡನ್: ಮನೆಯಲ್ಲಿ ನಿಗಾದಲ್ಲಿರುವ ಕೊರೊನಾ ಶಂಕಿತರು ಅಥವಾ ಆಸ್ಪತ್ರೆಯಲ್ಲಿರುವ ಕೊರೊನಾ ಪೀಡಿತರು ಹೊರ ಬಂದರೆ ಅವರಿಗೆ 1 ಸಾವಿರ ಯುರೋ(ಅಂದಾಜು 91 ಸಾವಿರ ರೂ) ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಇಂಗ್ಲೆಂಡ್ ಸರ್ಕಾರ ಮುಂದಾಗುವ ಸಾಧ್ಯತೆಯಿದೆ.
Advertisement
ಕೊರೊನಾ ಪೀಡಿತರು ಅಥವಾ ಕೊರೊನಾ ಶಂಕಿತರು ನಿಗಾದಲ್ಲಿ ಇರಬೇಕು. ಒಂದು ವೇಳೆ ಆಸ್ಪತ್ರೆಯಿಂದ ಅಥವಾ ಮನೆಯಿಂದ ಹೊರ ಬಂದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಇವರ ಮೇಲೆ 1 ಸಾವಿರ ಯುರೋ ದಂಡ ಮತ್ತು ಜೈಲಿಗೆ ಹಾಕಲು ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
ಕೊರೊನಾ ವಿರುದ್ಧ ಹೋರಾಡಲು ಈಗ ಕೆಲ ತುರ್ತು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಶಂಕಿತರು ಆಸ್ಪತ್ರೆಯಲ್ಲೇ ಇರಬೇಕು. ಕೊರೊನಾ ಪೀಡಿತ ದೇಶದಿಂದ ಆಗಮಿಸಿ ಈಗ ಕೊರೊನಾ ಬಾರದೇ ಇದ್ದರೂ 14 ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿ ಇರಬೇಕು ಎಂದು ಸೂಚಿಸಿದೆ. ಕೊರೊನಾ ವೈರಸ್ ಆರೋಗ್ಯ ರಕ್ಷಣೆ ನಿಯಮಗಳನ್ನು ಇಂಗ್ಲೆಂಡ್ ಸರ್ಕಾರ ತನ್ನ ವೆಬ್‍ಸೈಟಿನಲ್ಲಿ ಪ್ರಕಟಿಸಿದೆ.
Advertisement
Advertisement
ಈ ನಿಯಮದಲ್ಲಿ ಜನರು ಪ್ರವಾಸದ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಒಂದು ವೇಳೆ ಸುಳ್ಳು ಮಾಹಿತಿ ನೀಡಿದರೆ ಭಾರೀ ದಂಡ ವಿಧಿಸಲಾಗುತ್ತದೆ.
70 ವರ್ಷ ಮೀರಿದ ವ್ಯಕ್ತಿಗಳು ಯಾವುದೇ ಕಾರಣಕ್ಕೆ ಹೊರಗಡೆ ಬರಬೇಡಿ. ಕನಿಷ್ಠ 4 ತಿಂಗಳು ಮನೆಯಲ್ಲೇ ಇರಿ ಎಂದು ಇಂಗ್ಲೆಂಡ್ ಆರೋಗ್ಯ ಕಾರ್ಯದರ್ಶಿ ಮನವಿ ಮಾಡಿಕೊಂಡಿದ್ದಾರೆ. ಭಾನುವಾರ ಒಂದೇ ದಿನ 14 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಇಂಗ್ಲೆಂಡಿನಲ್ಲಿ ಒಟ್ಟು 1,391 ಕೇಸ್ ದಾಖಲಾಗಿದ್ದು 35 ಮಂದಿ ಮೃತಪಟ್ಟಿದ್ದಾರೆ.