– ಹೋಟೆಲ್, ಲಾಡ್ಜ್ ಖಾಲಿಖಾಲಿ
– ಕೇರಳಿಗರ ಸುಳಿವೇ ಇಲ್ಲ
ಮೈಸೂರು: ಕೊರೊನಾ ವೈರಸ್ ಹಾಗೂ ಹಕ್ಕಿ ಜ್ವರದ ಎಫೆಕ್ಟ್ ನೇರವಾಗಿ ಮೈಸೂರು ಪ್ರವಾಸೋದ್ಯಮದ ಮೇಲೆ ಬಿದ್ದಿದೆ. ಹೋಟೆಲ್, ಲಾಡ್ಜಿಂಗ್ ನಲ್ಲಿ ಬರೋಬ್ಬರಿ 50 ಕೋಟಿ ರೂ. ನಷ್ಟು ವಹಿವಾಟು ಸ್ಥಗಿತವಾಗಿದೆ.
ಪ್ರವಾಸಿಗರ ಸಂಖ್ಯೆಯಲ್ಲಿ ಶೇ.85 ರಷ್ಟು ಕುಸಿತ ಕಂಡಿದ್ದು, ಹೋಟೆಲ್ ಬುಕ್ಕಿಂಗ್ ಗಳು ಕ್ಯಾನ್ಸಲ್ ಆಗಿವೆ. ಅದರಲ್ಲೂ ಕೇರಳದ ಪ್ರವಾಸಿಗರು ಶೇಕಡ ಒಂದರಷ್ಟು ಕೂಡ ಮೈಸೂರಿಗೆ ಬರುತ್ತಿಲ್ಲ. ಇದರಿಂದ ಮೈಸೂರಿನ ಹೋಟೆಲ್ ಗಳು, ಲಾಡ್ಜ್ ಗಳು ಖಾಲಿ ಹೊಡೆಯುತ್ತಿವೆ.
Advertisement
Advertisement
ಈ ಕುರಿತು ಮೈಸೂರಿನ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮಾಹಿತಿ ನೀಡಿ, ಶೇ.85ರಷ್ಟು ಹೋಟೆಲ್ ಉದ್ಯಮ ಕುಸಿದಿದೆ. ಮುಂದಿನ ಎರಡು ತಿಂಗಳ ಬುಕಿಂಗ್ ಕೂಡ ಸ್ಥಗಿತವಾಗಿದೆ. ನೆರೆ ಬಂದಾಗಲೂ ಹೋಟೆಲ್ ಉದ್ಯಮ ಕುಸಿದಿರಲಿಲ್ಲ. ಕೊರೊನಾ ಆತಂಕ ಹಾಗೂ ಭಯದಲ್ಲಿ ಕುಸಿದಿದೆ. ಹೋಟೆಲ್ ಸಂಘದಿಂದ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
Advertisement
ಭಿತ್ತಿ ಪತ್ರ ಹಾಗೂ ಪೋಸ್ಟರ್ ಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಮೈಸೂರು ಪ್ರವಾಸೋದ್ಯಮದಿಂದಲೇ ನಡೆಯುತ್ತಿದೆ. ಆದರೆ ಕೊರೊನಾ ಆತಂಕದಿಂದ ಮೈಸೂರಿನಲ್ಲಿ ಪ್ರವಾಸೋದ್ಯಮ ತಳಮಟ್ಟಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗುತ್ತದೆಯೋ ಎಂಬ ಆತಂಕ ಶುರುವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.