ಮಂಡ್ಯ: ಕೊರೊನಾ ವೈರಸ್ ರಾಜ್ಯದ ಜನರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇದೀಗ ಕೋಳಿ ಮಾಂಸದ ಮಾರಾಟದಲ್ಲಿಯೂ ವ್ಯತ್ಯಯವಾಗಿದೆ.
ರಾಜ್ಯದಲ್ಲಿ ಅತೀ ಹೆಚ್ಚು ಮಾಂಸ ಪ್ರಿಯರು ಇರುವ ಮಂಡ್ಯ ಜಿಲ್ಲೆಯಲ್ಲಿ ಸಹ ಕೊರೊನಾ ವೈರಸ್ ಭೀತಿಯಿಂದಾಗಿ ಕೋಳಿ ಮಾಂಸದ ರೇಟ್ ಬಿದ್ದಿದೆ. ಕಳೆದ ವಾರ ಕೋಳಿ ಮಾಂಸ ಪ್ರತಿ ಕೆಜಿಗೆ 140 ರಿಂದ 145 ರೂ. ವರೆಗೆ ಇತ್ತು. ಆದರೆ ಇಂದು 80 ರೂಪಾಯಿಗೆ ಇಳಿದಿದೆ. ಈ ಮೂಲಕ ಒಂದು ಕೆಜಿಗೆ 60 ರಿಂದ 65 ರೂಪಾಯಿ ಇಳಿತ ಕಂಡಿದೆ. ಮೂರು ದಿನಗಳಲ್ಲಿ ಇಷ್ಟು ಪ್ರಮಾಣದಲ್ಲಿ ಕೋಳಿ ಮಾಂಸದ ದರ ಇಳಿಕೆ ಕಂಡಿರುವುದು ಮಾರಾಟಗಾರರಿಗೆ ನಷ್ಟವಾಗಿದೆ ಎಂದು ಮಾರಾಟಗಾರರು ಹೇಳುತ್ತಾ ಇದ್ದಾರೆ.
Advertisement
Advertisement
ಫಾರಂ ಕೋಳಿಯನ್ನು ಜನರು ತಿನ್ನುವ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜನರು ನಾಟಿಕೋಳಿ ಮತ್ತು ಕುರಿ ಹಾಗೂ ಮೇಕೆ ಮಾಂಸದ ಖರೀದಿಗೆ ಹೆಚ್ಚಿದ್ದಾರೆ. ಮಂಡ್ಯದಲ್ಲಿ ನಾಟಿ ಕೋಳಿ ಕೆ.ಜಿಗೆ 400 ರಿಂದ 450 ರೂ. ವರೆಗೆ ಇದೆ. ಕುರಿ ಹಾಗೂ ಮೇಕೆಯ ಮಾಂಸ ಕೆಜಿಗೆ 450 ರಿಂದ 530ರ ವರೆಗೂ ಇದೆ.