– ಫೈವ್ ಸ್ಟಾರ್, ಥ್ರಿ ಸ್ಟಾರ್ ಹೋಟೆಲ್‍ಗಳ ಬುಕ್ಕಿಂಗ್ ಕ್ಯಾನ್ಸಲ್
ಬೆಂಗಳೂರು: ಇಡೀ ವಿಶ್ವದೆಲ್ಲೆಡೆ ಕೊರೊನಾ ಭೀತಿ ಎದುರಾಗಿದೆ. ಈ ಮಹಾಮಾರಿ ಬೆಂಗಳೂರಿಗೂ ವಕ್ಕರಿಸಿದ್ದು, ಸಿಲಿಕಾನ್ ಸಿಟಿಯ ಐಷಾರಾಮಿ ಹೋಟೆಲ್ ಉದ್ಯಮ ಪಾತಾಳಕ್ಕೆ ಕುಸಿಯುತ್ತಿದೆ.
ಕೊರೊನಾ ವೈರಸ್ ಕೇವಲ ಆರೋಗ್ಯದ ಮೇಲೆ ಮಾತ್ರವಲ್ಲದೆ, ಜಾಗತಿಕ ಶೇರು ಮಾರುಕಟ್ಟೆ, ಚಿನ್ನ, ಪ್ರವಾಸೋದ್ಯಮ ಹೀಗೆ ಹತ್ತು ಹಲವು ಪರಿಣಾಮ ಬೀರಿದೆ. ಜೊತೆಗೆ ಹೋಟೆಲ್ ಉದ್ಯಮ ಅದರಲ್ಲೂ ಬೆಂಗಳೂರಿನ ಐಷಾರಾಮಿ ಹೋಟೆಲ್ ಉದ್ಯಮದ ಮೇಲೆ ಪ್ರಭಾವ ಬೀರಿದೆ. ನಗರದಲ್ಲಿ 17 ಸಾವಿರ ಹೋಟೆಲ್‍ಗಳಿದ್ದು, ಅದರಲ್ಲಿ 580 ಫೈವ್ ಸ್ಟಾರ್, ಥ್ರಿ ಸ್ಟಾರ್ ಹೋಟೆಲ್‍ಗಳಿವೆ.
Advertisement
Advertisement
ಈ ಸ್ಟಾರ್ ಹೋಟೆಲ್‍ಗಳ ಶೇ.20-30 ಬುಕಿಂಗ್‍ಗಳು ಕ್ಯಾನ್ಸಲ್ ಆಗಿವೆ. ಇದರಿಂದ ಪ್ರತಿ ದಿನ 1 ಕೋಟಿಯಷ್ಟು ನಷ್ಟವಾಗುತ್ತಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ. ಈ ಫೈವ್ ಸ್ಟಾರ್ ಹೋಟೆಲ್‍ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರೇ ಸ್ಟೇ ಮಾಡುತ್ತಾರೆ.
Advertisement
Advertisement
ವಿದೇಶಿಗರಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗಿರುವುದರಿಂದ ತಮಗೆ ಎಲ್ಲಿ ಕೊರೊನಾ ಬರುತ್ತೋ ಎನ್ನೋ ಭೀತಿಯಿಂದ ಜನ ಫೈ ಸ್ಟಾರ್ ಹೋಟೆಲ್‍ಗಳಲ್ಲಿ ಉಳಿಯಲು ಹೆದರುತ್ತಿದ್ದಾರೆ. ಕೊರೊನಾ ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಸಿಬ್ಬಂದಿಗೆ ಸ್ವಚ್ಛತೆ ಬಗ್ಗೆ ತರಬೇತಿ ಕೂಡ ನೀಡಲಾಗಿದೆ. ಅಲ್ಲದೇ ರೂಮ್‍ಗಳನ್ನು ಶುಚಿಯಾಗಿ ಇಡಲಾಗಿದೆ ಎಂದು ಹೋಟೆಲ್ ಅಸೋಸಿಯೇಷನ್ ಅವರು ತಿಳಿಸಿದ್ದಾರೆ.