ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಕೊರೊನಾ ಸೋಂಕಿತ ವೈದ್ಯನ ಪತ್ನಿ ಮತ್ತು ಮಗಳಿಗೂ ವೈರಸ್ ಸೋಂಕು ಇರುವುದು ದೃಢವಾಗಿದೆ.
ದೆಹಲಿಯಲ್ಲಿ ಬುಧವಾರ ಐದು ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಒಟ್ಟು 35ಕ್ಕೆ ತಲುಪಿದೆ ಎಂದು ದೆಹಲಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಐದು ಪ್ರಕರಣಗಳಲ್ಲಿ ಎರಡು ಶಾಹ್ದಾರದ ಮೊಹಲ್ಲಾ ಕ್ಲಿನಿಕ್‍ನಲ್ಲಿ ಕೆಲಸ ಮಾಡುತ್ತಿದ್ದ 49 ವರ್ಷದ ವೈದ್ಯನ ಪತ್ನಿ (38) ಮತ್ತು ಮಗಳು (17) ಎಂದು ತಿಳಿದು ಬಂದಿದೆ. ಮಾರ್ಚ್ 21 ರಂದು ಸೌದಿ ಅರೇಬಿಯಾದಿಂದ ವಾಪಸ್ ಆಗಿದ್ದ ಮಹಿಳೆ ತನ್ನ ಮನೆಯ ಸಮೀಪವಿರುವ ಕ್ಲಿನಿಕ್‍ಗೆ ಹೋಗಿ ಪರೀಕ್ಷೆ ಮಾಡಿಸಿದ್ದರು. ಅಂದೇ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.
Advertisement
ಇದೀಗ ಇಬ್ಬರಿಗೆ ಗುರು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಆ ಮಹಿಳೆಯೊಂದಿಗೆ ಒಡನಾಟದಲ್ಲಿದ್ದ ಜಹಾಂಗೀರ್‌ಪುರಿಯ 35 ವರ್ಷದ ವ್ಯಕ್ತಿಗೂ ಕೊರೊನಾ ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೇ ಮಹಿಳೆಯ ಕುಟುಂಬದ ನಾಲ್ವರಿಗೆ ಸಹ ಸೋಂಕು ಇರುವು ಗೊತ್ತಾಗಿದೆ.
Advertisement
ಸೈನಿಕ್ ಫಾರ್ಮ್ಸ್ ಪ್ರದೇಶದ ನಿವಾಸಿಗಳಾದ 21 ವರ್ಷದ ಮತ್ತು 41 ವರ್ಷದ ವ್ಯಕ್ತಿ ಇಬ್ಬರಿಗೂ ಕೊರೊನಾ ದೃಢಪಟ್ಟಿದೆ. ಇಬ್ಬರೂ ವಿದೇಶ ಪ್ರವಾಸದಿಂದ ಹಿಂದಿರುಗಿದ್ದು, ಮನೆಗೂ ಭೇಟಿ ಕೊಡದೆ ನೇರವಾಗಿ ಸರ್ಕಾರದ ಆದೇಶದಂತೆ ಕ್ವಾರಂಟೈನ್‍ನಲ್ಲಿದ್ದರು. ಈಗ ಮೆದಾಂತ ಮತ್ತು ರಾಜೀವ್ ಗಾಂಧಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ದೆಹಲಿಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿಯಲ್ಲಿ ಕೊರೊನಾ ವೈಸರ್ ಸೋಂಕಿಗೆ ಒಳಗಾದವರಲ್ಲಿ ಐವರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಬ್ಬರು ಸಾವನ್ನಪ್ಪಿದ್ದಾರೆ. ಇಟಲಿಯಿಂದ ಹಿಂದಿರುಗಿದ್ದ 68 ವರ್ಷದ ಮಹಿಳೆ ಮೃತಪಟ್ಟಿರುವುದು.