ಕಲಬುರಗಿ: 80 ವರ್ಷದ ವೃದ್ಧ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಸೋಮವಾರ ರಾತ್ರಿ ಬಂದ ವರದಿಯಲ್ಲಿ ವೃದ್ಧನಿಗೆ ಕೊರೊನಾ ತಗುಲಿರೋದು ದೃಢಪಟ್ಟಿತ್ತು. ಕಲಬುರಗಿಯಲ್ಲಿ ಕೊರೊನಾಗೆ ನಾಲ್ಕನೇ ಸಾವು ಇದಾಗಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಮನೆಮಾಡಿದೆ.
Advertisement
ಕಲ್ಪುರ್ಗಿಯಲ್ಲಿ ಕಳೆದ 3 ವರ್ಷಗಳಿಂದ ಪಾರ್ಕಿನ್ಸನ್ ನಿಂದ ಬಳಲುತ್ತಿದ್ದ 80 ವರ್ಷದ ಹಿರಿಯರು ನಿನ್ನೆ ಸಾವನ್ನಪಿದ್ದಾರೆ. ಮೊನ್ನೆ ಜ್ವರ ಇದ್ದುದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿನ್ನೆ ಬೆಳಗ್ಗೆ 9 ಗಂಟೆಗೆ ಅವರು ವಿಧಿವಶರಾಗಿದ್ದಾರೆ. ನಿನ್ನೆ ರಾತ್ರಿ 9ಕ್ಕೆ ಮೃತರ ವರದಿ ಬಂದಿದ್ದು, #COVID19 ಪಾಸಿಟಿವ್ ಇದ್ದದ್ದು ತಿಳಿದುಬಂದಿದೆ.
— Dr Sudhakar K (@mla_sudhakar) April 21, 2020
Advertisement
ಮೃತ ವೃದ್ಧ ತಬ್ಲಿಘಿಯೋರ್ವನ ಸಂಬಂಧಿಯಾಗಿದ್ದರಿಂದ ಒಂದು ವಾರದ ಹಿಂದೆ ಕಲಬುರಗಿಯ ಇಎಸ್‍ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೃದ್ಧನ ಮೊದಲ ವೈದ್ಯಕೀಯ ವರದಿ ನೆಗಟಿವ್ ಬಂದಿತ್ತು. ವೃದ್ಧ ಸಾಯುವ ಮುನ್ನ ಆತನ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎರಡನೇ ವರದಿಯಲ್ಲಿ ಕೊರೊನಾ ತಗುಲಿರೋದು ದೃಢಪಟ್ಟಿದೆ. ಇನ್ನು ಈ ವೃದ್ಧ ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಹಾಗಾಗಿ ಈತನಿಂದ ಬೇರೆತಯವರಿಗೆ ಕೊರೊನಾ ತಗುಲಿರುವ ಸಾಧ್ಯತೆಗಳು ಕಡಿಮೆ ಇವೆ. ಮೃತ ವೃದ್ಧನ ಕುಟುಂಬಸ್ಥರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.