ನವದೆಹಲಿ: ಕೋಟ್ಯಾಂತರ ಜನರ ಮೈ ಹೊಕ್ಕು, ಲಕ್ಷಾಂತರ ಜನರ ಸಾವಿಗೆ ಕಾರಣವಾದ ಕೊರೊನಾ ವೈರಸ್ ಅಂತ್ಯ ಕಾಲ ಸನ್ನಿಹಿತವಾಗಿದ್ದು, ಮುಂದಿನ ವರ್ಷದ ವೇಳೆಗೆ ಇದು ಸಾಮಾನ್ಯ ಶೀತವಾಗಿ ಬದಲಾಗಲಿದೆ ಎಂದು ಅಂತರಾಷ್ಟ್ರೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಾನಮರ್ಯಾದೆ ಇಲ್ಲದ ಸರ್ಕಾರದ ವಿರುದ್ಧ ಜನರ ಧ್ವನಿಯಾಗಿ ಹೋರಾಟ: ಡಿ.ಕೆ ಶಿವಕುಮಾರ್
Advertisement
ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಪ್ರಾಧ್ಯಾಪಕ ಪ್ರೊಫೆಸರ್ ಸರ್ ಜಾನ್ ಬೆಲ್ ಈ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದು, ವಿಶ್ವದ್ಯಾಂತ ವ್ಯಾಕ್ಸಿನ್ ಹಂಚಿಕೆಯಾಗುತ್ತಿದ್ದು, ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಇದರಿಂದ ಅದು ದೇಹಕ್ಕೆ ಹೆಚ್ಚು ಹಾನಿ ಮಾಡದ ಶೀತವಾಗಿ ಬದಲಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಆಯ್ಕೆಗೆ ಇನ್ನೊಂದು ಚಾನ್ಸ್ ಕಲ್ಪಿಸಿಕೊಡಬಹುದು ಐಪಿಎಲ್?
Advertisement
Advertisement
ಆರು ತಿಂಗಳ ಹಿಂದೆಗೆ ಹೋಲಿಸಿಕೊಂಡರೆ ಈಗ ಬಹಳಷ್ಟು ಪರಿಸ್ಥಿತಿ ಸುಧಾರಿಸಿದೆ. ಚಳಿಗಾಲದ ಬಳಿಕ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರಬಹುದು. ಆದರೆ ರೂಪಾಂತರಿ ವೈರಸ್ ತಳಿಯ ಬಗ್ಗೆ ಜಾಗೃತಿ ಮುಂದುವರಿಯಬೇಕಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಇದನ್ನೂ ಓದಿ: ಬರ್ತ್‍ಡೇ ಕ್ಯಾಂಡಲ್ ಉದುವಾಗ ಕೂದಲಿಗೆ ಬೆಂಕಿ – ಕಿರುಚಾಡಿದ ಟಿವಿ ಸ್ಟಾರ್
Advertisement
ಎರಡು ಡೋಸ್ ಲಸಿಕೆ ಪಡೆದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಬಲಿಷ್ಠ ಹಿಡಿತ ಹೊಂದಿದೆ. ಈಗ ವ್ಯಾಕ್ಸಿನ್ ಮಾರುಕಟ್ಟೆ ವಿಸ್ತಾರವಾಗಿದ್ದು, ಎಲ್ಲ ಕಡೆಗೆ ಲಭ್ಯವಾಗಿದೆ. ಹೀಗಾಗಿ ಕೊರೊನಾ ಇನ್ಮುಂದೆ ಹೆಚ್ಚು ಬಾಧಿಸದು, ಅವಶ್ಯಕತೆ ಬಂದಲ್ಲಿ ಬೂಸ್ಟರ್ ಶಾಟ್‍ಗೂ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿವಾದ – ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್