ಇಸ್ಲಾಮಾಬಾದ್: ಸಮಸ್ಯೆ ಬಂದಾಗ ಪಾಕಿಸ್ತಾನವನ್ನು ವಿಶ್ವದ ಪ್ರಮುಖ ವೇದಿಕೆಗಳಲ್ಲಿ ಪಾರು ಮಾಡುವ ಚೀನಾ ಈಗ ಅಂಡರ್‌ವೇರ್‌ನಿಂದ ತಯಾರಾದ ಮಾಸ್ಕ್ ಕಳುಹಿಸಿ ನಗೆಪಾಟಲಿಗೆ ಗುರಿಯಾಗಿದೆ.
ವೇಗವಾಗಿ ಹಬ್ಬುತ್ತಿರುವ ಕೊರೊನಾ ನಿಯಂತ್ರಿಸಲು ಪಾಕಿಸ್ತಾನ ಗುಣಮಟ್ಟದ ಎನ್95 ಮಾಸ್ಕ್ ಗಳಿಗೆ ಬೇಡಿಕೆ ಇಟ್ಟಿತ್ತು. ಈ ಬೇಡಿಕೆಯನ್ನು ಪುರಸ್ಕರಿಸಿದ ಚೀನಾ ಮಾಸ್ಕ್ ಗಳನ್ನು ಕಳುಹಿಸಿಕೊಟ್ಟಿದೆ.
Advertisement
Advertisement
ತನ್ನ ಆಪ್ತ ದೇಶವಾಗಿರುವ ಚೀನಾ ಕಳುಹಿಹಿಸಿದ ಮಾಸ್ಕ್ ಗಳನ್ನು ಸರ್ಕಾರ ಪರಿಶೀಲಿಸದೇ ನೇರವಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದೆ. ಆಸ್ಪತ್ರೆಯ ಸಿಬ್ಬಂದಿ ಪ್ಯಾಕ್ ತೆರೆದು ನೋಡಿದಾಗ ಅಂಡರ್‍ವೇರ್ ನಿಂದ ತಯಾರಾದ ಮಾಸ್ಕ್ ನೋಡಿ ಶಾಕ್ ಆಗಿದ್ದಾರೆ.
Advertisement
ಈ ವಿಚಾರ ಪಾಕಿಸ್ತಾನದ ಟಿವಿ ಮಧ್ಯಮಗಳಲ್ಲಿ ಪ್ರಸಾರವಾದ ಬಳಿಕ ವಿಡಿಯೋ ವೈರಲ್ ಆಗಿದೆ.
Advertisement
China promised to send top quality N-95 masks to Pakistan. When the consignment landed, Pakistanis found that China had sent masks made of underwear.
Pakistani anchor says “China ne Choona laga diya”. #ChineseVirusCorona pic.twitter.com/3H4Uo151ZJ
— Major Gaurav Arya (Retd) (@majorgauravarya) April 4, 2020
ಪಾಕಿಸ್ತಾನ ಸರ್ಕಾರ ಚೀನಾ ಬಳಿ 2 ಲಕ್ಷ ಫೇಸ್ ಮಾಸ್ಕ್, 2 ಸಾವಿರ ಎನ್ 95 ಮಾಸ್ಕ್, 5 ವೆಂಟಿಲೇಟರ್, 2 ಸಾವಿರ ಟೆಸ್ಟಿಂಗ್ ಕಿಟ್ಸ್, 2 ಸಾವಿರ ಮೆಡಿಕಲ್ ರಕ್ಷಣಾ ವಸ್ತ್ರಗಳನ್ನು ಕಳಹಿಸಬೇಕು ಎಂದು ಮನವಿ ಮಾಡಿತ್ತು.
ಕೊರೊನಾ ವೈರಸ್ ಭೀತಿಯಿಂದ ಪಾಕಿಸ್ತಾನ ಚೀನಾ ಜೊತೆಗಿನ ಗಡಿಯನ್ನು ಮುಚ್ಚಿದೆ. ಆದರೆ ಚೀನಾ ಮೆಡಿಕಲ್ ವಸ್ತುಗಳನ್ನು ಸಾಗಿಸಲು ಗಡಿಯನ್ನು ತೆರೆಯಬೇಕೆಂದು ಕೇಳಿಕೊಂಡಿತ್ತು.