ನವದೆಹಲಿ: ಜಗತ್ತಿನೆಲ್ಲೆಡೆ ಕೊರೊನಾ ವೈರಸ್ ತಾಂಡವಾಡುತ್ತಿದೆ. ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡು ಈ ಭಯಾನಕ ವೈರಸ್ ಇಂದು ಇಡೀ ವಿಶ್ವಕ್ಕೆ ದೊಡ್ಡ ತಲೆನೋವಾಗಿದೆ. ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡಿಕೊಳ್ಳುತ್ತಿರುವ ಈ ಮಹಾಮಾರಿ ಸೋಂಕು ಜನಸಾಮಾನ್ಯರಿಂದ ಹಿಡಿದು ವಿಐಪಿ ವ್ಯಕ್ತಿಗಳಿಗೆ ಬಂದಿದೆ.
ಒಟ್ಟು 127 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 1,34,769 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದಲ್ಲಿ 3,117 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 4,983 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸುಮಾರು 70,388 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಯಾರಿಗೆಲ್ಲ ಬಂದಿದೆ?
ಕೆನಡಾ ದೇಶದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗ್ರೆಗೊಯಿರ್-ಟ್ರುಡೊ, ಅವರಿಗೂ ಕೂಡ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ. ಆದರೆ ಪತ್ನಿಗೆ ಕಾಣಿಸಿಕೊಂಡರೂ ಕೆನಡಾ ಪ್ರಧಾನಿ ಟ್ರುಡೊ ಅವರಿಗೆ ಸೋಂಕಿನ ಯಾವುದೇ ಲಕ್ಷಣ ಕಾಣಿಸಿಕೊಂಡಿಲ್ಲ. ಅವರು ಆರೋಗ್ಯವಾಗಿಯೇ ಇದ್ದಾರೆ. ಇದನ್ನು ಓದಿ: 127 ರಾಷ್ಟ್ರ, ಪ್ರಾಂತ್ಯಗಳ ಮೇಲೆ ಕೊರೊನಾ ಕರಿ ನೆರಳು – ಸೋಂಕಿಗೆ ಬಲಿಯಾದವರೆಷ್ಟು? ಚೇತರಿಸಿಕೊಂಡವರೆಷ್ಟು?
Advertisement
Advertisement
ಆಸ್ಟ್ರೇಲಿಯಾದ ವೇಗದ ಬೌಲರ್ ಕೇನ್ ರಿಚರ್ಡ್ಸನ್ ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸೌತ್ ಆಫ್ರಿಕಾದಿಂದ ಬಂದ ರಿಚರ್ಡ್ಸನ್ ತೀವ್ರತರವಾದ ಗಂಟಲು ನೋವು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಕೂಡ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ರಿಪೋರ್ಟ್‍ಗಾಗಿ ಕಾಯುತ್ತಿದ್ದಾರೆ.
ದೇಶದ ಜನತೆಗೆ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದ ಇಂಗ್ಲೆಂಡ್ ಆರೋಗ್ಯ ಸಚಿವೆಗೂ ಕೊರೊನಾ ವೈರಸ್ ಬಂದಿರುವುದು ಹೆಲ್ತ್ ಚೆಕಪ್ ವೇಳೆ ದೃಢಪಟ್ಟಿತ್ತು. ಇಂಗ್ಲೆಂಡ್‍ನ ಆರೋಗ್ಯ ಸಚಿವೆ ನಾಡಿನ್ ಡೋರಿಸ್‍ಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ವಿಷಯ ತಿಳಿದು ಬಂದ ಕೂಡಲೇ ಸ್ವತಃ ನಾಡಿನ್ ಡೋರಿಸ್ ಅವರೇ ಮನೆಯಿಂದ ಹೊರಗೆ ಬಾರದೇ ಗೃಹ ಬಂಧನದಲ್ಲಿದ್ದಾರೆ.
ಸ್ಪೇನ್ ಸಮಾನತೆ ಸಚಿವ ಐರೀನ್ ಮೊಂಟೆರೊ ಅವರು ಕೊರೊನಾ ವೈರಸ್ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿತ್ತು. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸ್ಪೇನ್ ಅಧಿಕಾರಿಗಳು ಇಡೀ ಕ್ಯಾಬಿನೆಟ್ ಮತ್ತು ರಾಜಮನೆತನವನ್ನು ಪರೀಕ್ಷೆಗೆ ಒಳಪಡಿಸಿದ್ದರು. ಜೊತೆಗೆ ಆಸ್ಕರ್ ಪ್ರಶಸ್ತಿ ವಿಜೇತ ನಟ ಟಾಮ್ ಹ್ಯಾಂಕ್ಸ್ ಮತ್ತು ಅವರ ಪತ್ನಿ ರೀಟಾ ವಿಲ್ಸನ್ ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ ಖಚಿತಪಡಿಸಿದ್ದಾರೆ. ಇದನ್ನು ಓದಿ: 1 ವಾರ ಕರ್ನಾಟಕ ಲಾಕ್ ಡೌನ್- ಮಾಲ್, ಕಾಲೇಜುಗಳಿಗೆ ರಜೆ, ಜಾತ್ರೆ ರದ್ದು
ಇರಾನ್‍ನ ಹಿರಿಯ ಉಪಾಧ್ಯಕ್ಷ ಇಶಾಕ್ ಜಹಾಂಗೇರಿ, ಸಾಂಸ್ಕೃತಿಕ ಪರಂಪರೆಯ ಸಚಿವ ಅಲಿ ಅಸ್ಗರ್ ಮತ್ತು ಕೈಗಾರಿಕಾ, ಗಣಿ ಮತ್ತು ವ್ಯವಹಾರ ಸಚಿವ ಮೌನೇಸನ್ ರೆಜಾ ರಹಮಾನ್ ಅವರಿಗೆ ಕೊರೊನ ವೈರಸ್ ಇರುವುದು ಪತ್ತೆಯಾಗಿದೆ.
ಭಾರತದಲ್ಲಿ ಈವರೆಗೂ ಯಾವುದೇ ಪ್ರಸಿದ್ಧ ವ್ಯಕ್ತಿಗಳಲ್ಲಿ ಕೊರೊನಾ ವೈರಸ್ ಇರುವುದು ತಿಳಿದು ಬಂದಿಲ್ಲ.