ಮೈಸೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹಳೆ ಮೈಸೂರು ಭಾಗದ ಸಿಬಿಎಸ್‍ಸಿ ಶಾಲಾ ಮಕ್ಕಳಿಗೆ ಬಂಪರ್ ಆಫರ್ ಸಿಕ್ಕಿದಂತಾಗಿದೆ. ಅಂದರೆ LKG, UKG ಹಾಗೂ 1 ರಿಂದ 4ನೇ ತರಗತಿ ಮಕ್ಕಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಸಿಬಿಎಸ್‍ಸಿ ಶಾಲೆಗಳ ಒಕ್ಕೂಟ ಯೋಚನೆ ಮಾಡಿದೆ.
ಅಷ್ಟೇ ಅಲ್ಲದೇ 9 ನೇ ತರಗತಿ ಒಳಗಿನ ಮಕ್ಕಳಿಗೆ ಪ್ರಿಪರೇಟರಿ ಪರೀಕ್ಷೆ ಅಂತಿಮ ಪರೀಕ್ಷೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳ ಖಾಸಗಿ ಸಿಬಿಎಸ್‍ಸಿ ಶಾಲೆಗಳ ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ. ಈ ನಿರ್ಣಯಕ್ಕೆ 5 ಜಿಲ್ಲೆಗಳ 240 ಸಿಬಿಎಸ್‍ಸಿ ಶಾಲೆಗಳಿಂದ ಒಪ್ಪಿಗೆ ಸಿಕ್ಕಿದೆ.
Advertisement
Advertisement
4ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸದೆ ಪಾಸ್ ಮಾಡುವ ನಿರ್ಧಾರ ಕೈಗೊಳ್ಳಾಗಿದೆ. 9ನೇ ತರಗತಿವರೆಗಿನ ಮಕ್ಕಳಿಗೆ ಪ್ರಿಪರೇಟರಿ ಪರೀಕ್ಷೆಯನ್ನೆ ಅಂತಿಮ ಪರೀಕ್ಷೆಯನ್ನಾಗಿ ಪರಿಗಣಿಸುವ ನಿರ್ಧಾರ ಮಾಡಲಾಗಿದೆ. 20ರ ಒಳಗೆ ಎಲ್ಲ ಸಿಬಿಎಸ್‍ಸಿ ಕಡ್ಡಾಯವಾಗಿ ರಜೆ ಘೋಷಣೆ ಮಾಡಬೇಕು. ಮಕ್ಕಳನ್ನ ಬೇಸಿಗೆ ಶಿಬಿರಕ್ಕೂ ಕರೆದುಕೊಂಡು ಹೋಗಬಾರದು ಎಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಬಿಎಸ್‍ಸಿ ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ ಸುಧಾಕರ್ ಶೆಟ್ಟಿ ತಿಳಿಸಿದರು.