ನೆಲಮಂಗಲ: ಮಹಾಮಾರಿ ಕೊರೊನಾ ವೈರಸ್ ಬಿಸಿ ಇದೀಗ ರಾಷ್ಟ್ರೀಯ ಟೋಲ್ ಕಂಪನಿಗಳಿಗೂ ತಟ್ಟಿದೆ.
ಹೊರ ಜಿಲ್ಲೆಗಳಿಂದ ಬೆಂಗಳೂರು ಕಡೆ ಬರುವ ವಾಹನ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಬೆಂಗಳೂರು ನಗರದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರು, ತುಮಕೂರು ಹಾಗೂ ಮಂಗಳೂರು ನೆಲಮಂಗಲ ಮಾರ್ಗದ ನವಯುಗ ಟೋಲ್ ನಲ್ಲಿ ಗಣನೀಯವಾಗಿ 4 ರಿಂದ 5 ಸಾವಿರ ಪ್ರಮಾಣದಲ್ಲಿ ವಾಹನಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಇದೇ ರೀತಿಯಲ್ಲಿ ಬೆಂಗಳೂರು ಕಡೆಯಿಂದ ಬೇರೆ ಊರುಗಳಿಗೂ ಹೋಗುವ ವಾಹನ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಕೊರೊನಾ ಭೀತಿ ಇರುವ ಹಿನ್ನೆಲೆಯಲ್ಲಿ ಹೊರಬಾರದ ಜನರು ವಾಹನಗಳು ಹೀಗಾಗಿ ಟೋಲ್ ಪ್ಲಾಜಾಗಳು ಖಾಲಿ ಹೊಡೆಯುತ್ತಿವೆ.
ನೆಲಮಂಗಲ ನವಯುಗ ಟೋಲ್ ನ ಮುಖ್ಯ ವ್ಯವಸ್ಥಾಪಕ ರಾಮನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈ ಹರಡಿರುವ ಕೊರೊನಾ ಭೀತಿಯಿಂದ ಜನರು ಹೊರಬರಲು ಹೆದರುತಿದ್ದಾರಾ ಎಂಬ ಪ್ರಶ್ನೆ ಮೂಡಿಸಿದೆ. ಕಳೆದ ವಾರ ಅಂದ್ರೆ ಕೊರೊನಾ ಬಗ್ಗೆ ಎಲ್ಲೆಡೆಯೂ ಜಾಗೃತಿ ಮೂಡುತ್ತಿದ್ದಂತೆ ಜನರಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ನಮ್ಮ ಟೋಲ್ ನಲ್ಲಿ ಈ ವಾರ ಸಾಕಷ್ಟು ಪ್ರಮಾಣದಲ್ಲಿ ವಾಹನಗಳ ಸಂಖ್ಯೆಯಲ್ಲಿ ಇಳಿಮುಖ ಕಂಡಿದೆ ಎಂದಿದ್ದಾರೆ.
ಅಲ್ಲದೆ ಕೊರೊನಾ ಶಂಕೆ ಇರುವ ಹಿನ್ನೆಲೆಯಲ್ಲಿ ನಮ್ಮ ಕಂಪನಿಯ ಸಿಬ್ಬಂದಿಯಲ್ಲಿಯೂ ಜಾಗೃತಿ ಮೂಡಿಸಿದ್ದು ಎಲ್ಲಾ ರೀತಿಯ ಕ್ರಮಗಳನ್ನ ಕೈಗೊಳ್ಳಲಾಗಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ನಮ್ಮ ಟೋಲ್ ನಲ್ಲಿ ಜನರು ಸಂಚರಿಸುತ್ತಾರೆ ಹೀಗಾಗಿ ನಮ್ಮ ಸಿಬ್ಬಂದಿಗೂ ಅರಿವು ಮೂಡಿಸಲಾಗಿದೆ ಎಂದರು.