– ಅಮೆರಿಕದಲ್ಲಿ 50 ಸಾವಿರಕ್ಕೂ ಅಧಿಕ ಸಾವು
ನವದೆಹಲಿ: ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, 723 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 23 ಸಾವಿರ ಗಡಿದಾಟಿದೆ.
ಕಳೆದೆರಡು ದಿನಗಳಿಂದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಮಹಾಮಾರಿ ಕೊರೊನಾಗೆ ಕೇರಳದಲ್ಲಿ 4 ತಿಂಗಳ ಮಗು ಅಸುನೀಗಿದೆ. ದೇಶದಲ್ಲೇ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. 6,430 ಜನರಿಗೆ ಸೋಂಕು ತಗುಲಿದ್ದು, 283 ಮಂದಿ ಸಾವನಪ್ಪಿದ್ದಾರೆ. ದೆಹಲಿ ಮತ್ತು ಗುಜರಾತ್‍ನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇದ್ದು, 3 ಸಾವಿರ ಗಡಿ ತಲುಪುತ್ತಿದೆ.
Advertisement
Advertisement
ತಮಿಳುನಾಡಿನಲ್ಲಿ ಕೊರೊನಾ ಬಾದಿತರ ಪ್ರಮಾಣ ಗಣನೀಯವಾಗಿ ಏರುತ್ತಿದೆ. ತಮಿಳುನಾಡು ಸರ್ಕಾರ ಚೆನ್ನೈ, ಮಧುರೈ, ಕೊಯಂಬತ್ತೂರ್‍ನಲ್ಲಿ ಏಪ್ರಿಲ್ 28ರ ವರೆಗೆ ಕಟ್ಟುನಿಟ್ಟಿನ ಲಾಕ್‍ಡೌನ್ ಘೋಷಿಸಿದೆ. ಆಂಧ್ರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2 ಹೊಸ ಸಾವು ಪ್ರಕರಣ ಸೇರಿ 29 ಮಂದಿ ಬಲಿಯಾಗಿದ್ದಾರೆ.
Advertisement
ಯಾವ ರಾಜ್ಯಗಳಲ್ಲಿ ಹೆಚ್ಚು?
ಮಹಾರಾಷ್ಟ್ರದಲ್ಲಿ 6,430 ಜನರಿಗೆ ಸೋಂಕು ತಗುಲಿದ್ದು, 283 ಜನ ಸಾವನ್ನಪ್ಪಿದ್ದಾರೆ. ಗುಜರಾತ್‍ನಲ್ಲಿ ಸೋಂಕಿತರ ಸಂಖ್ಯೆ 2,624ಕ್ಕೆ ಹೆಚ್ಚಿದರೆ 112 ಜನ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 2,376 ಜನರಿಗೆ ಸೋಂಕು ತಗುಲಿದೆ. 50 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ 1,852 ಜನರಿಗೆ ಸೋಂಕು ತಗುಲಿದೆ. 83 ಜನ ಅಸು ನೀಗಿದ್ದಾರೆ.
Advertisement
ವಿಶ್ವ ಮಟ್ಟದಲ್ಲಿ ಸಹ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆ 2 ಲಕ್ಷದ ಗಡಿ ತಲುಪುತ್ತಿದೆ. ಸೋಂಕಿತರ ಸಂಖ್ಯೆ 27 ಲಕ್ಷದ ದಾಟಿದೆ. ಅಮೆರಿಕಾದಲ್ಲಿ ಸಾವಿನ, ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. 50,849 ಮಂದಿ ಅಮೆರಿಕದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. 8,92,761 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಸ್ಪೇನ್‍ನಲ್ಲಿ 22,549 ಮಂದಿ ಬಲಿಯಾಗಿದ್ದು, 2,19,764 ಮಂದಿ ಸೋಂಕಿತರಿದ್ದಾರೆ. ಇಟಲಿಯಲ್ಲೂ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, 1,89,973 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಬೆಲ್ಜಿಯಂನಲ್ಲಿ ಕಳೆದ 24 ಗಂಟೆಗಳಲ್ಲಿ 189 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.