ಮುಂಬೈ: ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಲವು ನಟ, ನಟಿಯರು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಕೆಲವರು ಧನ ಸಹಾಯ ಮಾಡಿದರೆ, ಇನ್ನೂ ಕೆಲವರು ಸಾಮಾಜಿಕ ಕಾರ್ಯಗಳ ಮೂಲಕ ನೆರವಾಗುತ್ತಿದ್ದಾರೆ. ಆದರೆ ಈ ನಟಿ ಮಾತ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ತಾವೇ ನರ್ಸ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಈ ಮೂಲಕ ಕೊರೊನಾ ಸೋಂಕು ತಡೆಯಲು ನೆರವಾಗುತ್ತಿದ್ದಾರೆ.
Advertisement
ಬಾಲಿವುಡ್ ನಟಿ ಶಿಖಾ ಮೆಲ್ಹೋತ್ರಾ ನರ್ಸ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ಇತರರಿಗಿಂತ ಭಿನ್ನವಾಗಿ ಸೇವೆ ಸಲ್ಲಿಸುತ್ತಿದ್ದು, ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶಿಖಾ `ಕಾಂಚ್ಲಿ` ಸಿನಿಮಾದಲ್ಲಿ ಹಿರಿಯ ನಟ ಸಂಜಯ್ ಮಿಶ್ರಾ ಜೊತೆಗೆ ನಟಿಸಿದ್ದಾರೆ. ಇದೀಗ ಸ್ವಯಂ ಸೇವಕಿ ಎಂಬಂತೆ ನರ್ಸ್ ಆಗಿ ಕೆಲಸ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
Advertisement
content/uploads/2020/03/shikhamalhotra_official_75388536_159346578770185_2857374303772532431_n-600×600.jpg” alt=”” width=”600″ height=”600″ class=”alignnone size-medium wp-image-524659″ />
Advertisement
ಈ ಕುರಿತು ತಮ್ಮ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು, ನಾನು ವರ್ಧಮಾನ್ ಮಹಾವೀರ್ ಮೆಡಿಕಲ್ ಕಾಲೇಜು ಹಾಗೂ ಸಫ್ದರ್‍ಜಂಗ್ ಆಸ್ಪತ್ರೆಯಲ್ಲಿ ಐದು ವರ್ಷಗಳ ಕಾಲ ಬಿಎಸ್‍ಸಿ ನರ್ಸಿಂಗ್ ಮಾಡಿರುವುದು ಹಲವರಿಗೆ ತಿಳಿದಿಲ್ಲ. ಈವರೆಗೆ ನನ್ನೆಲ್ಲ ಸಾಧನೆ ಹಾಗೂ ಕೆಲಸಗಳಿಗೆ ಪ್ರೋತ್ಸಾಹ ನೀಡಿದ್ದೀರಿ. ಈ ಬಾರಿಯೂ ನಿಮ್ಮ ಬೆಂಬಲ ಇರಲಿ. ಕೊರೊನಾ ವೈರಸ್‍ನ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನರ್ಸ್ ಡ್ರೆಸ್ ಹಾಕಿಕೊಂಡು ದೇಶ ಸೇವೆಗೆ ಮುಂದಾಗಿದ್ದೇನೆ. ಮುಂಬೈನಲ್ಲಿನ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಿಮ್ಮ ಆಶೀರ್ವಾದ ಸದಾ ಇರಲಿ. ಅಲ್ಲದೆ ಮನೆಯಲ್ಲೇ ಇರಿ ಸುರಕ್ಷಿತವಾಗಿರಿ, ಸರ್ಕಾರಕ್ಕೆ ಬೆಂಬಲ ನೀಡಿ ಎಂದು ಬರೆದುಕೊಂಡಿದ್ದಾರೆ.
Advertisement
ಶಿಖಾ ಅವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ನರ್ಸ್ ಯೂನಿಫಾರ್ಮ್ ತೊಟ್ಟಿರುವ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.
ಸಿನಿಮಾ ರಂಗಕ್ಕೆ ಬರುವ ಮೊದಲು ನರ್ಸಿಂಗ್ ಕೋರ್ಸ್ ಮಾಡಿ ಅನುಭವವಿರುವ ಹಿನ್ನೆಲೆಯಲ್ಲಿ ಇದೀಗ ಅವರು ಮರಳಿ ತಮ್ಮ ವೃತ್ತಿ ಪ್ರಾರಂಭಿಸಿದ್ದಾರೆ. ಅದೂ ಸಹ ಇಂಥ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನರ್ಸ್ ವೃತ್ತಿಗೆ ಮರಳಿದ್ದಕ್ಕೆ ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿಖಾ ಮೆಲ್ಹೋತ್ರಾ ಅವರು ದೆಹಲಿಯ ವರ್ಧಮಾನ್ ಮಹಾವೀರ್ ಮೆಡಿಕಲ್ ಕಾಲೇಜಿನಲ್ಲಿ ನರ್ಸಿಂಗ್ ಪದವಿ ಪಡೆದಿದ್ದು, ಸಫ್ದರ್‍ಜಂಗ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ. ನಂತರ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆಯಿಂದಾಗಿ ಬಾಲಿವುಡ್‍ಗೆ ಎಂಟ್ರಿ ಕೊಟ್ಟರು. ಇದೀಗ ಮತ್ತೆ ನರ್ಸ್ ಯೂನಿಫಾರ್ಮ್ ಹಾಕುವ ಮೂಲಕ ಕಷ್ಟದ ಸಂದರ್ಭದಲ್ಲಿ ಜನರ ಸಹಾಯಕ್ಕೆ ನಿಂತಿದ್ದಾರೆ. ಕೊರೊನಾ ಸೋಂಕಿತರ ಆರೈಕೆ ಮಾಡುವ ಮೂಲಕ ದೇಶ ಸೇವೆಯಲ್ಲಿ ತೊಡಗಿದ್ದಾರೆ.