ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿರುವ ಅಮಾನಿ, ಭೈರಸಾಗರ ಕೆರೆ ನೋಡಲು ಬಂದವರಿಗೆ ಕೋವಿಡ್-19 ಲಸಿಕೆ ಹಾಕುವ ಮೂಲಕ ವಿನೂತನ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ನಡೆದಿದೆ.
Advertisement
ಗುಡಿಬಂಡೆಯಲ್ಲಿ ಅಮಾನಿ, ಭೈರಸಾಗರ ಕೆರೆ ತುಂಬಿ ಹರಿದಿದೆ ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮದ ಜನರು ಆಗಮಿಸಿದ್ದಾರೆ. ಇದನ್ನು ಕಂಡು ಗುಡಿಬಂಡೆ ತಾಲೂಕು ಅರೋಗ್ಯಾಧಿಕಾರಿ ವಿನೂತನ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಆರಂಭಿಸಿದ್ದಾರೆ. ಗುಡಿಬಂಡೆ ಆರೋಗ್ಯ ಇಲಾಖಾ ಸಿಬ್ಬಂದಿಯ ಕಾರ್ಯಕ್ಕೆ ಡಿಎಚ್ ಇಂದಿರಾ ಕಬಾಡೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಇದುವರೆಗೂ ಶೇ.86 ರಷ್ಟು ಮಂದಿ ಮೊದಲ ಲಸಿಕೆ ಪಡೆದಿದ್ದು, ಶೇ.42 ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಇಂದಿರಾ ಕಬಾಡೆ ತಿಳಿಸಿದ್ದಾರೆ. ಇದನ್ನೂ ಓದಿ: ಲಸಿಕೆ ಬಗ್ಗೆ ಮುಂದುವರಿದ ಮೌಢ್ಯತೆ – ಅಧಿಕಾರಿಗಳಿಗೆ ಕುಂಟು ನೆಪ ಹೇಳಿ ಎಸ್ಕೇಪ್
Advertisement
Advertisement
ಕೆರೆ ತುಂಬಿಹರಿಯುತ್ತಿರುವುದನ್ನು ನೋಡಲು ಬಂದ ನೂರಾರು ಜನರಿಗೆ ವ್ಯಾಕ್ಸಿನ್ ಶಾಕ್ ಎದುರಾಗಿದೆ. ತಾಲೂಕು ಆರೋಗ್ಯಾಧಿಕಾರಿಗಳು ಕೆರೆ ನೋಡಲು ಆಗಮಿಸಿದ ಸಾರ್ವಜನಿಕರಿಗೆ ಕೆರೆಯ ದಡದಲ್ಲೆ ಲಸಿಕೆ ನೀಡುವ ಮೂಲಕ ಕೊರೊನಾ ಜಾಗೃತಿ ಮೂಡಿಸಿದ್ದಾರೆ. ಹಲವು ಕಡೆ ಹಳ್ಳಿಯ ಜನ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆಸ್ಪತ್ರೆಗೆ ತೆರಳಿ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿಲ್ಲ. ಮನೆ ಮನೆಗೆ ಬಂದು ಲಸಿಕೆ ಕೊಡಲು ಮುಂದಾದರು ಹಾಕಿಸಿಕೊಳ್ಳಲು ಸಾರ್ವಜನಿಕರು ಭಯಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಂದು ಜಿಲ್ಲೆಯ ಗ್ರಾಮಸ್ಥರು ಕೆರೆ ನೋಡಲು ಬಂದು ವ್ಯಾಕ್ಸಿನ್ ಹಾಕಿಸಿಕೊಳ್ಳುವಂತಾಗಿದೆ. ಇದನ್ನೂ ಓದಿ: ಲಸಿಕೆ ಪ್ರಮಾಣ ಹೆಚ್ಚಳ – ಯಾದಗಿರಿ ಜಿಲ್ಲಾಡಳಿತದ ಪ್ಲ್ಯಾನ್ ಯಶಸ್ವಿಯಾಗಿದ್ದು ಹೇಗೆ?
Advertisement