ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ ಒಂದೇ ದಿನ 4,08,259 ಮಂದಿಗೆ ಲಸಿಕೆ ಹಾಕಲಾಗಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 70,936 ಮಂದಿಗೆ ಲಸಿಕೆ ನೀಡಲಾಗಿದೆ. ಈ ಮೂಲಕ ಲಸಿಕೆ ವಿತರಣೆಯಲ್ಲಿ ದೇಶದ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ.
Advertisement
ಲಸಿಕಾಕರಣದಲ್ಲಿ ದೇಶದ ನಗರಗಳ ಪೈಕಿ ಬಿಬಿಎಂಪಿ ಪ್ರಥಮ ಸ್ಥಾನದಲ್ಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ 84,280 ಮಂದಿಗೆ ಲಸಿಕೆ ನೀಡಿರುವ ದಕ್ಷಿಣ ವಲಯ ಅತೀ ಹೆಚ್ಚು ಲಸಿಕಾಕರಣ ಮಾಡಿದ ವಲಯವಾಗಿ ಪ್ರಥಮ ಸ್ಥಾನದಲ್ಲಿದೆ. ನಂತರ ಸ್ಥಾನದಲ್ಲಿ 75,874 ಮಂದಿ ಲಸಿಕೆ ಪಡೆದಿರುವ ಪಶ್ಚಿಮ ವಲಯವಿದೆ. ಕೊನೆಯ ಸ್ಥಾನದಲ್ಲಿ 22,834 ಮಂದಿಗೆ ಲಸಿಕೆ ನೀಡಿರುವ ಯಲಹಂಕ ವಲಯವಿದೆ. ಇದನ್ನೂ ಓದಿ: ಮೂರು ದಿನ ರಾಜ್ಯದ ಹಲವೆಡೆ ಭಾರೀ ಮಳೆ- ಯಲ್ಲೋ ಅಲರ್ಟ್ ಘೋಷಣೆ
Advertisement
ಎಂಟು ವಲಯಗಳ 2,187 ಲಸಿಕಾ ಕೇಂದ್ರಗಳಲ್ಲಿ 3,76,906 ಕೋವಿಶೀಲ್ಡ್ ಮತ್ತು 29,603 ಕೋವ್ಯಾಕ್ಸಿನ್ ಡೋಸ್‍ಗಳನ್ನು ನೀಡಲಾಗಿದೆ. ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 3,69,469 ಮಂದಿ ಮತ್ತು ಖಾಸಗಿ ಲಸಿಕಾ ಕೇಂದ್ರಗಳಲ್ಲಿ 37,397 ಮಂದಿ ಲಸಿಕೆ ಪಡೆದಿದ್ದು, ಸ್ಪುಟ್ನಿಕ್ ಲಸಿಕೆಯನ್ನು 357 ಮಂದಿಗೆ ಕೊಡಲಾಗಿದೆ.
Advertisement
Advertisement
ವಲಯವಾರು ಲಸಿಕೆ:
ದಕ್ಷಿಣ ವಲಯದಲ್ಲಿ 45,426 ಪುರುಷರು, 38,843 ಮಹಿಳೆಯರು ಮತ್ತು 11 ಮಂದಿ ಇತರರು ಲಸಿಕೆ ಪಡೆದಿದ್ದಾರೆ. ಪಶ್ಚಿಮ ವಲಯದಲ್ಲಿ 40,562 ಪುರುಷರು, 35,291 ಮಹಿಳೆಯರು, 20 ಇತರರು ಹಾಗೂ ಪೂರ್ವ ವಲಯದಲ್ಲಿ 36,692 ಪುರುಷರು, 31,823 ಮಹಿಳೆಯರು, 21 ಇತರರು ಲಸಿಕೆ ಪಡೆದುಕೊಂಡಿದ್ದಾರೆ.
ಬೊಮ್ಮನಹಳ್ಳಿ ವಲಯದಲ್ಲಿ 27,218 ಪುರುಷರು, 23,139 ಮಹಿಳೆಯರು, 15 ಇತರರು ಹಾಗೂ ಮಹದೇವಪುರ ವಲಯದಲ್ಲಿ 27,219 ಪುರುಷರು, 16,995 ಮಹಿಳೆಯರು, 12 ಇತರರು ಲಸಿಕೆ ಪಡೆದಿದ್ದಾರೆ. ರಾಜರಾಜೇಶ್ವರಿ ನಗರ ವಲಯದಲ್ಲಿ 17,432 ಪುರುಷರು, 17,783 ಮಹಿಳೆಯರು, 9 ಇತರರು ಲಸಿಕೆ ಪೆದುಕೊಂಡಿದ್ದಾರೆ. ದಾಸರಹಳ್ಳಿ ವಲಯದಲ್ಲಿ 13,544 ಪುರುಷರು, 11,966 ಮಹಿಳೆಯರು, 8 ಇತರರು ಮತ್ತು ಯಲಹಂಕ ವಲಯದಲ್ಲಿ 12,896 ಪುರುಷರು, 9,938 ಮಹಿಳೆಯರು ಹಾಗೂ 3 ಮಂದಿ ಇತರರು ಲಸಿಕೆ ಹಾಕಿಸಿಕೊಂಡಿದ್ದಾರೆ. 2,20,989 ಪುರುಷರು ಹಾಗೂ 1,85,778 ಮಹಿಳೆಯರು ಮತ್ತು 99 ಮಂದಿ ಇತರರು ಸೇರಿದಂತೆ ಒಟ್ಟು 4,06,866 ಮಂದಿ ಬೃಹತ್ ಲಸಿಕಾ ಅಭಿಯಾನದಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ.