ಕಳಪೆ ಗುಣಮಟ್ಟದ ಕಿಟ್ ಚೀನಾಕ್ಕೆ ಕಳುಹಿಸಿ – ಕೇಂದ್ರ ಸರ್ಕಾರ

Public TV
3 Min Read
corona FINAL

ನವದೆಹಲಿ: ಕೋವಿಡ್-19 ಪರೀಕ್ಷಿಸಲು ಚೀನಾದಿಂದ ಖರೀದಿಸಿದ್ದ  ರ‍್ಯಾಪಿಡ್ ಟೆಸ್ಟ್ ಕಿಟ್ ಳು ಕಳಪೆಯಾಗಿದ್ದು ಅವುಗಳನ್ನು ಬಳಸಬೇಡಿ ಎಂದು ರಾಜ್ಯ ಸರ್ಕಾರಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಸೂಚಿಸಿದೆ.

ಕಳಪೆ ಗುಣಮಟ್ಟದ ಕಿಟ್ ಗಳ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅವುಗಳನ್ನು ಪೂರೈಸಿದ ಕಂಪನಿಗಳಿಗೆ ವಾಪಸ್ ಕಳುಹಿಸಿ ಎಂದು ಪತ್ರ ಬರೆದಿದೆ.

Corona A 2

ಚೀನಾದ ಗುವಾಂಗ್ಜೌ ವೊಂಡ್‍ಪೋ ಬಯೋಟೆಕ್ ಮತ್ತು ಲಿವ್ ಝೊನ್ ಡಯಾಗ್ನಿಸ್ಟಿಕ್ಸ್ ಕಂಪನಿಗಳಿಂದ ಭಾರತದ 5 ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್ ಗಳನ್ನು ಖರೀದಿಸಿತ್ತು. ಈ ಕಂಪನಿಗಳಿಗೆ ಯಾವುದೇ ಹಣವನ್ನು ಪಾವತಿ ಮಾಡಿಲ್ಲ. ಹೀಗಾಗಿ ನಮಗೆ ನಷ್ಟವಾಗುವುದಿಲ್ಲ ಎಂದು ಭಾರತ ಸರ್ಕಾರ ತಿಳಿಸಿದೆ.

ಚೀನಾದಿಂದ ಆಮದಾಗಿದ್ದ ರ್ಯಾಪಿಡ್ ಟೆಸ್ಟ್ ಕಿಟ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಐಸಿಎಂಆರ್ ಗೆ ದೂರು ನೀಡಿತ್ತು. ಏ.21ರಂದು ನಾವು ಸೂಚನೆ ನೀಡುವವರೆಗೆ ಈ ಟೆಸ್ಟ್ ಕಿಟ್ ಗಳನ್ನು ಬಳಸದಂತೆ ಐಸಿಎಂಆರ್ ಸೂಚನೆ ನೀಡಿತ್ತು. ಇದನ್ನೂ ಓದಿ: ಲಾಕ್‍ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ: ಅಮಿತ್ ಶಾ

Corona 25

ಐಸಿಎಂಆರ್ ಹಿರಿಯ ವಿಜ್ಞಾನಿ ರಮನ್ ಆರ್ ಗಂಗಾಖೇಡ್ಕರ್ ಪ್ರತಿಕ್ರಿಯಿಸಿ, ಒಂದು ರಾಜ್ಯದಿಂದ ಈ ಫಲಿತಾಂಶದ ಬಗ್ಗೆ ದೂರು ಬಂದಿದೆ. ಇದಾದ ಬಳಿಕ ನಾವು ಮೂರು ರಾಜ್ಯದವರ ಜೊತೆ ಮಾತನಾಡಿದಾಗ ನಿಖರವಾಗಿ ಪಾಸಿಟಿವ್ ಫಲಿತಾಂಶ ಬರುತ್ತಿಲ್ಲ. ಕೆಲವೊಂದು ಕಡೆ ಶೇ.6 ರಷ್ಟು ಬಂದರೆ ಕೆಲವೊಂದು ಶೇ.71 ರಷ್ಟು ಫಲಿತಾಂಶ ಬಂದಿದೆ ಎಂದು ಕಳೆದ ವಾರ ತಿಳಿಸಿದ್ದರು.

ಕೇವಲ 3.5 ತಿಂಗಳ ರೋಗದ ಪರೀಕ್ಷೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣ ವ್ಯತ್ಯಾಸ ಬರಕೂಡದು. ಹೀಗಾಗಿ ಮುಂದಿನ 2 ದಿನಗಳಲ್ಲಿ 8 ಮಂದಿ ಇರುವ ತಜ್ಞರ ತಂಡವನ್ನು ರಾಜ್ಯಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಹೇಳಿದ್ದರು.

Corona Lab a

ನಿಖರವಾದ ಫಲಿತಾಂಶಗಳು ಪ್ರಕಟವಾಗದ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರ ರ‍್ಯಾಪಿಡ್ ಟೆಸ್ಟ್ ಪರೀಕ್ಷೆಯನ್ನು ನಿಲ್ಲಿಸಿ ಐಸಿಎಂಆರ್ ಗಮನಕ್ಕೆ ತಂದಿತ್ತು. ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಪ್ರತಿಕ್ರಿಯಿಸಿ, ಶೇ.90 ರಷ್ಟು ನಿಖರ ಫಲಿತಾಂಶ ನೀಡಬೇಕಾದ ಕಿಟ್ ಕೇವಲ ಶೇ.5.4 ಫಲಿತಾಂಶ ನೀಡುತ್ತಿದ್ದು, ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದ್ದರು. ರಾಜಸ್ಥಾನದ ಬಳಿಕ ಪಶ್ಚಿಮ ಬಂಗಾಳ ಸಹ ಈ ಕಿಟ್ ಬಗ್ಗೆ ಐಸಿಎಂಆರ್ ಗೆ ದೂರು ನೀಡಿತ್ತು.

ಕೊರೊನಾ ಪರೀಕ್ಷೆ ಹೆಚ್ಚಿಸಲು ಭಾರತ ಸರ್ಕಾರ ಚೀನಾದಿಂದ 5 ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್ ಗಳನ್ನು ಆಮದು ಮಾಡಿಕೊಂಡಿತ್ತು. ಏಪ್ರಿಲ್ ಮೂರನೇ ವಾರ ಬಂದಿಳಿದ ಕಿಟ್ ಗಳನ್ನು ಅತಿ ಹೆಚ್ಚು ಕೊರೊನಾ ಸೋಂಕಿತರು ಕಂಡು ಬಂದಿದ್ದ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲು ರಾಜ್ಯಗಳಿಗೆ ಕಳುಹಿಸಲಾಗಿತ್ತು.

corona 9 1

ಈ ಮೊದಲು ಶಂಕಿತರ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಆದರೆ ಇದರಲ್ಲಿ ರಕ್ತದ ಮಾದರಿಯನ್ನು ಪಡೆಯುವ ಮೂಲಕ ಬಹಳ ವೇಗವಾಗಿ ಫಲಿತಾಂಶ ಪಡೆಯಬಹುದಾಗಿದೆ.

ಕರ್ನಾಟಕಕ್ಕೆ 20 ಸಾವಿರ ಕಿಟ್ ಗಳು ಬಂದಿದ್ದು ಕಳೆದ ವಾರ ಪರೀಕ್ಷೆ ನಡೆಯಬೇಕಿತ್ತು. ಐಸಿಎಂಆರ್ ತಡೆ ನೀಡಿದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆದಿರಲಿಲ್ಲ.

Corona 12

ಈ ಹಿಂದೆ ಜರ್ಮನಿ, ಫ್ರಾನ್ಸ್, ದಕ್ಷಿಣ ಕೊರಿಯಾ, ಇಸ್ರೇಲ್ ದೇಶಗಳಿಗೆ ಚೀನಾದಿಂದ ಪರೀಕ್ಷೆ ನಡೆಸುವ ಕಿಟ್ ಗಳು ರಫ್ತು ಆಗಿತ್ತು. ಈ ದೇಶಗಳ ಆರೋಗ್ಯ ಸಚಿವಾಲಯಗಳು ಈ ಕಿಟ್ ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ತಿರಸ್ಕರಿಸಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರವಾದ ಬಳಿಕ ಚೀನಾ ಸರ್ಕಾರ ಗುಣಮಟ್ಟದ ಟೆಸ್ಟ್ ಕಿಟ್ ತಯಾರಿಸುವ ಕಂಪನಿಯನ್ನು ಪಟ್ಟಿ ಮಾಡಿ ವಿವಿಧ ರಾಷ್ಟ್ರಗಳಿಗೆ ನೀಡಿತ್ತು. ಅಷ್ಟೇ ಅಲ್ಲದೇ ಚೀನಾದ ಕಸ್ಟಮ್ಸ್ ವಿಭಾಗವೂ ಈ ಕಿಟ್ ಗಳನ್ನು ಪರೀಕ್ಷೆ ಮಾಡಿ ನಂತರ ಒಪ್ಪಿಗೆ ನೀಡಿತ್ತು.

ಭಾರತ ಸರ್ಕಾರ ಆರ್ಡರ್ ಮಾಡಿದ ಪ್ರಕಾರ ಏ.6ಕ್ಕೆ 7 ಲಕ್ಷ ಕಿಟ್ ಗಳು ಬರಬೇಕಿತ್ತು. ಆದರೆ ಲಾಜಿಸ್ಟಿಕ್ಸ್ ಸಮಸ್ಯೆ ಮತ್ತು ಪರೀಕ್ಷಾ ಕಾರಣದಿಂದ ತಡವಾಗಿ ರವಾನೆಯಾಗಿತ್ತು. ಅತಿ ಹೆಚ್ಚು ಕೊರೊನಾ ಪ್ರಕರಣಗಳು ಬಂದಿರುವ ಹಾಟ್ ಸ್ಪಾಟ್ ಗಳಲ್ಲಿನ ವ್ಯಕ್ತಿಗಳನ್ನು ಪರೀಕ್ಷೆ ನಡೆಸಲು ಈ ಕಿಟ್ ಬಳಕೆ ಮಾಡಲು ಆಮದು ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *