– ಕೊನೆಗೂ ಹಿಡಿದು ತಂದ ಪೊಲೀಸರು
ಕಾರವಾರ: ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಶಂಕಿತನೆಂದು ದಾಖಲಾಗಿದ್ದ ಯುವಕ ಆಸ್ಪತ್ರೆಯಿಂದ ಭಾನುವಾರ ರಾತ್ರೋರಾತ್ರಿ ಪರಾರಿಯಾದ ಘಟನೆ ನಡೆದಿದೆ. ಮಾರ್ಚ್ 27ರಂದು ಆಸ್ಪತ್ರೆಗೆ ದಾಖಲಾಗಿದ್ದ ಈತ ನಿನ್ನೆ ರಾತ್ರಿ ವೇಳೆ ಪರಾರಿಯಾಗಿದ್ದಾನೆ.
ನಿನ್ನೆ ಬೆಳಗ್ಗಿನಿಂದ ಆಸ್ಪತ್ರೆಯ ಸುತ್ತಮುತ್ತ ಯುವತಿಯೋರ್ವಳು ಮಾಸ್ಕ್ ಧರಿಸಿಕೊಂಡು ಓಡಾಡಿಕೊಂಡಿದ್ದಳು. ಇದೇ ಯುವತಿ, ಯುವಕನಿಗೆ ಊಟ ನೀಡುವ ನೆಪದಲ್ಲಿ ವಾರ್ಡ್ ಪ್ರವೇಶಿಸಿ ಯುವಕನನ್ನು ಕರೆದುಕೊಂಡು ಹೋಗಿದ್ದಾಳೆ.
Advertisement
Advertisement
ಜ್ವರ ಹಾಗೂ ಗಂಟಲು ನೋವು ಹೊಂದಿರುವ ಈತ ಸಂಶಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಪರಾರಿಯಾದ ಯುವಕ ಪತ್ತೆ-ಪೊಲೀಸರು ಆರೋಗ್ಯ ಇಲಾಖೆಯಿಂದ ಮನವೊಲಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರಾರಿಯಾಗಿದ್ದ ಶಂಕಿತ ಯುವಕನನ್ನು ಪೊಲೀಸರು ಕೊನೆಗೂ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಜ್ವರ ಹಾಗೂ ಗಂಟಲು ನೋವು ಹೊಂದಿದ್ದ ಈತನನ್ನು ಅನುಮಾನದ ಮೇಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈತ ಕೊರೊನಾ ಸೋಂಕಿತರ ಅಥವಾ ವಿದೇಶದಿಂದ ಬಂದ ಯಾರ ಸಂಪರ್ಕಕ್ಕೂ ಹೋಗಿರಲಿಲ್ಲ. ಜೊತೆಗೆ ಕೊರೊನಾ ಲಕ್ಷಣ ಕಂಡು ಬಂದಿರಲಿಲ್ಲ ಎಂದು ವೈದ್ಯರು ದೃಢಪಡಿಸಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿತ್ತು.
Advertisement
ಆದರೆ ಭಯಗೊಂಡ ಯುವಕ ಪರಾರಿಯಾಗಿ ತನ್ನ ಮನೆ ಸೇರಿಕೊಂಡಿದ್ದ. ಮಾಹಿತಿ ತಿಳಿದ ಭಟ್ಕಳ ಪೊಲೀಸರು ಈತನ ಮನೆಗೆ ತೆರಳಿ ಕೌನ್ಸಿಲಿಂಗ್ ಮಾಡಿದ್ದು ನಂತರ ಭಟ್ಕಳ ಆಸ್ಪತ್ರೆಗೆ ಮರಳಿ ಕರೆತರಲಾಗಿದೆ. ಇಡೀ ಭಟ್ಕಳದಲ್ಲಿ ಭಯ ಹುಟ್ಟಿಸಿದ್ದ ಶಂಕಿತನ ಪರಾರಿ ಪ್ರಕರಣ ಸುಖಾಂತ್ಯ ಕಂಡಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ.