ಬೆಂಗಳೂರು: ಪ್ರಪಂಚದಾದ್ಯಂತ ಕೊರೊನಾ ಹರಡುತ್ತಿದೆ. ಅಲ್ಲದೆ ನಮ್ಮ ದೇಶದಲ್ಲೂ ಕೂಡ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ರಾಜ್ಯದಲ್ಲೂ ಕೂಡ ಮಾರ್ಚ್ 31ರವರೆಗೆ ಮೆಡಿಕಲ್ ಎಮರ್ಜೆನ್ಸಿಯನ್ನು ಸಹ ಘೋಷಣೆ ಮಾಡಿದೆ.
ಮೆಡಿಕಲ್ ಎಮೆರ್ಜೆನ್ಸಿ ಸಮಯದಲ್ಲಿ ಗುಂಪು ಗುಂಪಾಗಿ ಜನ ಸೇರುವುದನ್ನು ನಿಷೇಧಿಸಿದೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾತ್ರ ಅಧಿಕಾರಿಗಳು ಕೊರೊನಾ ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಶುಕ್ರವಾರ ಹಿನ್ನೆಲೆಯಲ್ಲಿ ರಿಜಿಸ್ಟರ್ ಮಾಡಿಸಲು ಮುಗಿಬಿದ್ದಿದ್ದಾರೆ. ಇದರಿಂದ ರಿಜಿಸ್ಟ್ರಾರ್ ಕಚೇರಿಯಲ್ಲಿ ಜನಸಂದಣಿ ಉಂಟಾಗಿದೆ.
Advertisement
Advertisement
ರಿಜಿಸ್ಟರ್ ಸಮಯದಲ್ಲಿ ಬೆರಳಿನ ಇಂಪ್ರೆಷನ್ ಕೂಡ ನೀಡಬೇಕು ಅನೇಕ ಜನ ಒಂದೇ ಮೆಷಿನ್ ನಲ್ಲಿ ಬೆರಳು ನೀಡುವುದರಿಂದ ಬಹು ಬೇಗನೆ ವೈರಸ್ ಹರಡುವ ಭೀತಿಯಲ್ಲಿ ಇಲ್ಲಿನ ಅಧಿಕಾರಿಗಳು ಸಹ ಕೆಲಸ ಮಾಡುವಂತಾಗಿದೆ.
Advertisement
ನೆಲಮಂಗಲ ಸಬ್ ರಿಜಿಸ್ಟ್ರಾರ್ ಗಳಾದ ನಾಗೇಂದ್ರ ಮತ್ತು ಗಿರೀಶ್ ಮಾತನಾಡಿ, ಇದು ಸರ್ಕಾರಿ ಕಚೇರಿ ಇಲ್ಲಿಗೆ ಸಾರ್ವಜನಿಕರನ್ನು ಬರಬೇಡಿ ಎಂದು ನಾವು ಹೇಳುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ ಇಲ್ಲಿ ನೂರಾರು ಜನ ಒಟ್ಟಿಗೆ ಬಂದು ಹೋಗುತ್ತಾರೆ. ಅದರಲ್ಲಿ ಯಾರಿಗೆ ಸೋಕಿದೆ ಎನ್ನುವುದು ತಿಳಿಯುವುದಿಲ್ಲ, ಎಲ್ಲರ ಜೊತೆ ನಾವು ಮಾತನಾಡಲೇಬೇಕು. ಇದರಿಂದ ನಾವು ಕೂಡ ಮನೆಯಲ್ಲಿ ನಮ್ಮ ಕುಟುಂಬದ ಜೊತೆ ಮುಕ್ತವಾಗಿ ಮಾತನಾಡಲು ಕೂಡ ಭಯಪಡುವಂತಾಗಿದೆ ಎಂದಿದ್ದಾರೆ.