ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಒಂದು ಕಡೆ ಪ್ರಕೃತಿ ಮುನಿಸಿಕೊಂಡು ಜಲಸ್ಟೋಟಗಳು ಆಗುತ್ತಿದ್ದು, ಜಿಲ್ಲೆಯ ಜನರು ಬೆಚ್ಚಿಬೀಳುತ್ತಿದ್ದಾರೆ. ಈ ವೇಳೆ ಯಾವುದೇ ಮುನ್ಸೂಚನೆ ಇಲ್ಲದೇ ಗುಪ್ತಗಾಮಿನಿಯಾಗಿ ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ನಿಧಾನವಾಗಿ ಏರಿಕೆಯಾಗುತ್ತಿದೆ.
ಕಳೆದ ಐದು ದಿನಗಳಲ್ಲಿ ಬರೋಬ್ಬರಿ 25 ಕೋವಿಡ್ ಪ್ರಕರಣ ಕಂಡುಬಂದಿದ್ದು, ಜಿಲ್ಲೆಯ ಜನರು ಮತ್ತೊಂದು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಕೊಡಗಿನ ಜನರಿಗೆ ಮಳೆಗಾಲ ಆರಂಭವಾಯಿತು ಅಂದ್ರೆ ಒಂದಲ್ಲ ಒಂದು ಸಮಸ್ಯೆ ಎದುರಾಗಿ ಬೀಡುತ್ತದೆ. ಮಳೆ ಆರಂಭ ಆಯ್ತು ಅಂದ್ರೆ ಬೆಟ್ಟ ಕುಸಿತ, ಗುಡ್ಡ ಕುಸಿತವಾಗಿದೆ. ಪ್ರವಾಹ, ಭೂಕಂಪ ಸೇರಿದಂತೆ ಮಳೆಯ ಅವಾಂತರಗಳೇ ಜಾಸ್ತಿ ಇರುತ್ತದೆ. ಇದರ ಸಾಲಿಗೆ ಕೊಡಗಿನ ಜನರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಇದನ್ನೂ ಓದಿ: ಯಡಿಯೂರಪ್ಪ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದವಿಲ್ಲ: ವಿಜಯೇಂದ್ರ
Advertisement
Advertisement
ವರ್ಷಗಟ್ಟಲೆ ಇಡೀ ದೇಶವನ್ನು ಕಾಡಿಸಿದ ಕೋವಿಡ್-19 ಇದೀಗಾ ಸದ್ದಿಲ್ಲದೇ ಕೊಡಗು ಜಿಲ್ಲೆಯ ಜನರನ್ನು ಕಾಡಲು ಮುಂದಾಗಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ ಐದು ದಿನಗಳಲ್ಲಿ 25 ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಆರೋಗ್ಯ ಇಲಾಖೆ ಟೆಸ್ಟಿಂಗ್ ಮಾಡುವ ಸಂದರ್ಭದಲ್ಲಿ ಜಿಲ್ಲೆಯ 25 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಹೀಗಾಗಿ ಆರೋಗ್ಯ ಇಲಾಖೆ ಮತ್ತಷ್ಟು ಜನರನ್ನು ಟೆಸ್ಟಿಂಗ್ ಮಾಡಲು ನಿರ್ಧಾರ ಮಾಡಿದೆ. ಈಗಾಗಲೇ ಈ ಸೋಂಕಿತರು ಆರೋಗ್ಯವಾಗಿದ್ರು. ಪಾಸಿಟಿವ್ ಇರುವ ಲಕ್ಷಣಗಳು ಕಂಡುಬಂದಿರುವ ಮನೆಯಲ್ಲೇ ಅವರನ್ನು ಇರಿಸಲಾಗಿದೆ ಎಂದು ಆರೋಗ್ಯ ಅಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.
Advertisement
Advertisement
ಈಗಾಗಲೇ ವಾತಾವರಣದಲ್ಲಿ ಸಾಕಷ್ಟು ಏರುಪೇರು ಇರುವುದು ಜಿಲ್ಲೆಯಲ್ಲಿ ಕಳೆದ ಮೂರುನಾಲ್ಕು ದಿನಗಳಿಂದ ಮಳೆಯ ವಾತಾವರಣದ ಜೊತೆಗೆ ಬಿಸಿಲು ಚಳಿಯ ವಾತಾವರಣ ಕಂಡು ಬರುತ್ತಿದೆ. ಹೀಗಾಗಿ ಕೆಲವರಿಗೆ ಜ್ವರ-ಕೆಮ್ಮು-ಶೀತಗಳು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮುನ್ನಚೇರಿಕೆ ಕ್ರಮವಾಗಿ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ ಟೆಸ್ಟ್ ಮಾಡಲು ಮುಂದಾಗುತ್ತಿದ್ದಾರೆ. ಇದನ್ನೂ ಓದಿ: Monkeypox; ಕೇರಳದಲ್ಲಿ 3ನೇ ಪ್ರಕರಣ ಪತ್ತೆ
ದಿನ ನಿತ್ಯ ಸುಮಾರು 300 ರಿಂದ 500 ಜನರಿಗೆ ಟೆಸ್ಟಿಂಗ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ಟೆಸ್ಟಿಂಗ್ ಹಾಗೂ ಆಸ್ಪತ್ರೆಗಳ ಬೇಡ್‍ಗಳನ್ನು ಮಿಸಲು ಇಟ್ಟಿಕೊಳ್ಳುವುದು ಸೂಕ್ತ ಹಾಗೂ ಜನರು ಈ ಹಿಂದೆ ಕೋವಿಡ್ ಬಂದಾಗ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡುವುದು ಮುಖ್ಯವಾಗಿದೆ ಎಂದು ಜಿಲ್ಲೆಯ ಜನರು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಒಟ್ಟಿನಲ್ಲಿ ಮಳೆಗಾಲದ ಅವಾಂತರಗಳ ಜೊತೆಗೆ ಗುಪ್ತಗಾಮಿನಿಯಾಗಿ ಸದ್ದಿಲ್ಲದೇ ಕೊರೊನಾ ಮಹಾಮಾರಿ ಜಿಲ್ಲೆಯ ಜನರನ್ನು ಬೆನ್ನಟ್ಟಿದ್ದು, ಜಿಲ್ಲೆಯ ಜನರು ಒಂದಲ್ಲ ಒಂದು ಸಮಸ್ಯೆಗೆ ಒಳಗಾಗುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.