– ವಿದ್ಯಾರ್ಥಿನಿಯ ತಾಯಿಯಿಂದ ಶಾಲೆಗೆ ಪತ್ರ
– ಭಯಗೊಂಡು ರಜೆ ಘೋಷಿಸಿದ ಶಾಲೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
ನಗರದ ವೈಟ್‍ಫೀಲ್ಡ್ ನ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯ ತಂದೆಗೆ ಕೊರೊನಾ ಸೋಂಕು ತಗುಲಿದೆ ಎಂದು ಶಂಕಿಸಲಾಗುತ್ತಿದೆ. ಈ ಬಗ್ಗೆ ಸ್ವತಃ ವಿದ್ಯಾರ್ಥಿನಿಯ ತಾಯಿ ಶಾಲಾ ಆಡಳಿತ ಮಂಡಳಿಗೆ ಪತ್ರ ಬರೆಯುವ ಮೂಲಕ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಮೂರರ ಕಂದಮ್ಮಗೆ ಕೊರೊನಾ ವೈರಸ್
Advertisement
ನನ್ನ ಪತಿಗೆ ಕೊರೊನಾ ಸೋಂಕು ಶಂಕೆ ಇದೆ. ಹೀಗಾಗಿ ನಾನು ಮಗಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ವಿದ್ಯಾರ್ಥಿನಿಯ ತಾಯಿ ಇಮೇಲ್ ಮೂಲಕ ತಿಳಿಸಿದ್ದಾರೆ. ಇಮೇಲ್ ನೋಡಿ ಭಯಗೊಂಡ ಶಾಲಾ ಆಡಳಿತ ಮಂಡಳಿ ತರಾತುರಿಯಲ್ಲಿ ಪೋಷಕರಿಗೆ ನೋಟಿಸ್ ಜಾರಿ ಮಾಡಿ ರಜೆ ಘೋಷಿಸಿದೆ.
Advertisement
Advertisement
ನಮ್ಮ ಶಾಲೆಯಲ್ಲಿ ಓದುವ ವಿದ್ಯಾರ್ಥಿನಿಯ ಪೋಷಕರೊಬ್ಬರಿಗೆ ಕೊರೊನಾ ಪಾಸಿಟಿವ್ ಇದೆ. ಹೀಗಾಗಿ ರಜೆ ಘೋಷಣೆ ಮಾಡುತ್ತೇವೆ ಎಂದು ಶಾಲಾ ಆಡಳಿತ ಮಂಡಳಿ ಎಲ್ಲಾ ಪೋಷಕರಿಗೂ ಪತ್ರ ಬರೆದಿದೆ. ಇದನ್ನು ತಿಳಿದ ಆರೋಗ್ಯಾಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ. ಇದನ್ನೂ ಓದಿ: ಕೊರೊನಾ ಟೆನ್ಶನ್ ಮಧ್ಯೆ ಬೆಂಗ್ಳೂರಿನಲ್ಲಿ ವಿಚಿತ್ರ ಸಾಂಕ್ರಾಮಿಕ ಕಾಯಿಲೆ
Advertisement
ಆರೋಗ್ಯಾಧಿಕಾರಿಗಳು ಶಾಲೆಗೆ ತೆರಳಿ ಮುಂಜಾಗೃತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಇಲ್ಲದೆ ಕೊರೊನಾ ಪಾಸಿಟಿವ್ ಎಂದು ಪೋಷಕರಿಗೆ ಭಯಪಡಿಸಿದ್ದಕ್ಕೆ ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಗ್ಯ ಇಲಾಖೆ ಕ್ರಮಕ್ಕೆ ಸಜ್ಜಾಗಿದೆ.
ಸದ್ಯ ಆರೋಗ್ಯಾಧಿಕಾರಿಗಳು ವೈಟ್‍ಫೀಲ್ಡ್ ನ ಸೋಂಕು ಶಂಕೆಯ ವ್ಯಕ್ತಿಯ ಅಪಾರ್ಟ್‍ಮೆಂಟ್‍ಗೂ ಭೇಟಿ ನೀಡಿ ಅಲ್ಲೂ ಕೂಡ ಸ್ಕ್ರೀನಿಂಗ್ ನಡೆಸಿದ್ದಾರೆ. ಎರಡನೇ ಬಾರಿಗೆ ದೃಢಪಡಿಸಿಕೊಳ್ಳಲು ಸೋಂಕು ಶಂಕೆಯ ವ್ಯಕ್ತಿಯ ರಕ್ತಮಾದರಿಯನ್ನು ಪುಣೆಗೆ ಕಳುಹಿಸಲಾಗಿದೆ.
ಆರೋಗ್ಯ ಇಲಾಖೆ ಶಾಲೆಯ ವಿರುದ್ಧ ಕ್ರಮಕ್ಕೆ ಸಜ್ಜಾಗಿದ್ದು, ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡಿದೆ. ಸದ್ಯ ಆಡಳಿತ ಮಂಡಳಿ ಶಾಲೆಗೆ ರಜೆ ಘೋಷಿಸಿದೆ.