ಕಾರವಾರ: ಕೊರೊನಾ ಸೋಂಕು ಕಂಡುಬಂದಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಗರ್ಭಿಣಿಯ ಮನೆಗೆ ಇಂದು ಜಾಲಿ ಪಟ್ಟಣ ಪಂಚಾಯತ್ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡಿದ್ದಾರೆ.
ಪಟ್ಟಣದ ಚೌಕ್ ಬಜಾರ್ ಸಮೀಪದ 26 ವರ್ಷದ ಐದು ತಿಂಗಳ ಗರ್ಭಿಣಿಗೆ ಕೊರೊನಾ ಸೋಂಕು ಇರುವುದು ಬುಧವಾರ ದೃಢಪಟ್ಟಿತ್ತು. ಮಹಿಳೆಯ ಪತಿ ದುಬೈನಿಂದ ವಾಪಸ್ ಆಗಿದ್ದು, ಆತನಿಂದಲೇ ಕೊರೊನಾ ತಗುಲಿರಬಹುದು ಎನ್ನಲಾಗಿದೆ.
Advertisement
Advertisement
ಮಹಿಳೆಯಲ್ಲಿ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಇಡೀ ಮನೆಗೆ ಸೋಡಿಯಂ ಹೈಫೋ ಕ್ಲೋರೈಡ್ ರಾಸಾಯನಿಕವನ್ನ ಪಟ್ಟಣ ಪಂಚಾಯತ್‍ನ ಹೆಲ್ತ್ ಇನ್ಸ್‌ಪೆಕ್ಟರ್ ಅಜಯ್ ಭಂಡಾರಕರ್ ನೇತೃತ್ವದಲ್ಲಿ ಪೌರ ಕಾರ್ಮಿಕರು ಸಿಂಪಡಣೆ ಮಾಡಿದ್ದಾರೆ.
Advertisement
ಕುಟುಂಬದವರ ಮೇಲೆ ನಿಗಾ
ಗರ್ಭಿಣಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳ ಜೊತೆ ಆಕೆ ಸಮಯ ಕಳೆದ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಪತಿಯ ಮೇಲೆ ಮತ್ತೆ ನಿಗಾ ಇಡಲಾಗಿದೆ. ಮಹಿಳೆಯ ಮನೆಯಲ್ಲಿ 35 ವರ್ಷದ ಸಂಬಂಧಿ ಮಹಿಳೆ ಇದ್ದರು ಎನ್ನಲಾಗಿದೆ. ಆಕೆಯ ಒಡನಾಟದಲ್ಲಿದ್ದ ಎಲ್ಲರ ಮೇಲೂ ಆರೋಗ್ಯ ಇಲಾಖೆ ನಿಗಾ ಇಡಲಾಗಿದೆ.
Advertisement
ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ಸೋಂಕಿತರ ಸಂಖ್ಯೆ 9ಕ್ಕೆ ಏರಿದ್ದು, 50 ಜನರ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲೇ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸೂಚನೆಗಳಿದ್ದು, ಸಾಮಾಜಿಕವಾಗಿ ಹರಡದಂತೆ ಆರೋಗ್ಯ ಇಲಾಖೆ ಜಿಲ್ಲೆಯ ಭಟ್ಕಳ ಸೇರಿದಂತೆ ಹಲವು ನಗರ ಪ್ರದೇಶದಲ್ಲಿ ಔಷಧಿ ಸಿಂಪಡಣೆ ಕಾರ್ಯ ಬರದಿಂದ ಸಾಗುತ್ತಿದೆ.