-ಡಾಣಕಶಿರೂರ ಗ್ರಾಮ ಸಂಪೂರ್ಣ ಸೀಲ್‍ಡೌನ್
-ಗರ್ಭಿಣಿಯ ಸೀಮಂತ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗಿ
-ಡ್ರೋಣ್ ಕ್ಯಾಮೆರಾದಿಂದ ಹದ್ದಿನ ಕಣ್ಣು
ಬಾಗಲಕೋಟೆ: ಜಿಲ್ಲೆಯ ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದ್ದು, ಗ್ರಾಮಸ್ಥರಿಗೆ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಬಂದ್ ಮಾಡಲಾಗಿದೆ.
Advertisement
ಮೂರು ದಿನಗಳ ಹಿಂದೆ ಡಾಣಕಶಿರೂರು ಗ್ರಾಮದ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ಆದ್ರೆ ಗರ್ಭಿಣಿಗೆ ಸೋಂಕು ಹೇಗೆ ತಗುಲಿದೆ ಎಂಬುವುದು ಇದುವರೆಗೂ ಪತ್ತೆಯಾಗಿಲ್ಲ. ಗರ್ಭಿಣಿಗೆ ಸೋಂಕು ತಗುಲಿರುವ ವಿಷಯ ತಿಳಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಾರಣ ಕೆಲವು ದಿನಗಳ ಹಿಂದೆ ನಡೆದ ಗರ್ಭಿಣಿಯ ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಸೇರಿದಂತೆ ಗ್ರಾಮದ ಬಹುತೇಕರು ಭಾಗಿಯಾಗಿದ್ದರು. ಗರ್ಭಿಣಿಯ ಪತಿ ಸಾಂಪ್ರದಾಯಿಕ ಕಜ್ಜಾಯ ಭಿಕ್ಷೆಗಾಗಿ ಗ್ರಾಮದ ಪ್ರತಿ ಪ್ರತಿ ಮನೆಗಳಿಗೂ ತೆರಳಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
Advertisement
Advertisement
ಈಗಾಗಲೇ ಗರ್ಭಿಣಿ (ರೋಗಿ ನಂ.607) ಸಂಪರ್ಕದಲ್ಲಿದ್ದ 128 ಜನರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಲಾಗಿದೆ. ಎಲ್ಲ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಕೋವಿಡ್-19 ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಜಿಲ್ಲಾಡಳಿತ ವರದಿಗಾಗಿ ಕಾಯುತ್ತಿದೆ.