ನೆಲಮಂಗಲ: ಕೋವಿಡ್ ಪಾಸಿಟಿವ್ ಇರುವ ಆರೋಗ್ಯ ಸಿಬ್ಬಂದಿಯೊಬ್ಬ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
Advertisement
ಬೆಂಗಳೂರು ಹೊರವಲಯದ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ನಸಿರ್ಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹಮೂರ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾ ಪಾಸಿಟಿವ್ ಬಂದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಸಮಸ್ಯೆ ಇಲ್ಲಾ ಅಂದರೆ ಮನೆಯಲ್ಲಿ ಹೋಮ್ ಐಸೋಲೇಶನ್ ಆಗಬೇಕು. ಅದನ್ನು ಬಿಟ್ಟು ಎನ್‍ಪಿಎಲ್ ಕ್ರಿಕೆಟ್ ಟೂರ್ನಮೆಂಟ್‍ನಲ್ಲಿ ಭಾಗವಹಿಸಿದ್ದಾನೆಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಆಧಾರ್ ಕಡ್ಡಾಯ – ಮುಂಬೈ ಮೇಯರ್
Advertisement
Advertisement
ನರಸಿಂಹಮೂರ್ತಿ, ಕೊರೊನಾ ಪಾಸಿಟಿವ್ ವರದಿಯಿದ್ದರೂ ಉದ್ದಟತನ ಮೇರೆದಿದ್ದು, ಗ್ರೌಂಡ್‍ನಲ್ಲಿ ಬಿಂದಾಸ್ ಆಗಿ ಓಡಾಡಿದ್ದಾರೆ. 3 ದಿನದ ಹಿಂದೆ ನಡೆದ ಎನ್‍ಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಸ್ಕ್ ಹಾಕದೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿದ್ದಾರೆ. ಈ ಸಿಬ್ಬಂದಿಯಿಂದ ಕ್ರಿಕೆಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಆತಂಕ ಶುರುವಾಗಿದೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ನಡುವೆಯೂ ಕೋಳಿ ವ್ಯಾಪಾರ ಜೋರು – ಕೋವಿಡ್ ನಿಯಮ ಉಲ್ಲಂಘನೆ
Advertisement