DistrictsKarnatakaKoppalLatestMain Post

ನವೋದಯ ವಿದ್ಯಾಲಯದಲ್ಲಿ ಕೊರೊನಾ ಸ್ಫೋಟ – 33 ಮಂದಿಗೆ ಸೋಂಕು

ಕೊಪ್ಪಳ: ಜಿಲ್ಲೆಯ ಕುಕನೂರಿನಲ್ಲಿರುವ ನವೋದಯ ವಿದ್ಯಾಲಯದಲ್ಲಿ 33 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

 ನವೋದಯ ವಿದ್ಯಾಲಯದಲ್ಲಿ 32 ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕರಿಗೆ ಸೋಂಕು ತಗುಲಿದೆ. ಜನವರಿ 12 ಹಾಗೂ 13 ರಂದು 13 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ ಶುಕ್ರವಾರ ಮತ್ತೆ 20 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ.

ನವೋದಯ ವಿದ್ಯಾಲಯದಲ್ಲಿ 550 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 618 ಜನರಿದ್ದಾರೆ. ಸದ್ಯ 618 ಮಂದಿಯನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿದ್ದು, ಎಲ್ಲರ ಆರ್‌ಟಿಪಿಸಿಆರ್‌ ವರದಿ ಬಂದಿದೆ. ಅದರಲ್ಲಿ 33 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದನ್ನೂ ಓದಿ: 8 ಪ್ರಯಾಣಿಕರ ವಾಹನದಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯ

ಇದೀಗ ಸೋಂಕಿತ ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳನ್ನು ತಳಕಲ್ಲಿನ ಕೊವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದ್ದು, ಉಳಿದವರು ನವೋದಯ ವಸತಿ ಶಾಲೆಯಲ್ಲಿ ಪ್ರತ್ಯೇಕ ಐಸೋಲೆಷನ್‍ನಲ್ಲಿದ್ದಾರೆ. ಇದನ್ನೂ ಓದಿ: 3 ಲಕ್ಷ ರೂ. ಗೆ ಹೆತ್ತ ಮಗುವನ್ನೇ ಮಾರಿದ ದಂಪತಿ ಅರೆಸ್ಟ್


Navodaya Vidyalaya, , Childrena, Teachers, Corona Virus, Koppala

Leave a Reply

Your email address will not be published. Required fields are marked *

Back to top button