ಬೀದರ್: ಕಿತ್ತೂರು ರಾಣಿ ಚೆನ್ನಮ್ಮ ಮೆಟ್ರಿಕ್ ನಂತರದ ವಸತಿ ಶಾಲೆಯಲ್ಲಿ ಕೊರೊನಾ ಮಹಾ ಸ್ಪೋಟವಾಗಿದ್ದು, ಇಂದು 16 ಮಕ್ಕಳಿಗೆ ಕೊರೊನಾ ವಕ್ಕರಿಸಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟವಾಗಿದೆ. ಈ ಪರಿಣಾಮ ವಸತಿ ಶಾಲೆಯ ಮಕ್ಕಳು ತೀವ್ರ ಆತಂಕದಲ್ಲಿದ್ದಾರೆ.
ಎರಡು ದಿನಗಳ ಹಿಂದೆ 5 ಮಕ್ಕಳಿಗೆ ಕೊರೊನಾ ವಕ್ಕರಿಸಿತ್ತು. ಅಂದು 140 ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಇಂದು ಆ ಕೊರೊನಾ ಟೆಸ್ಟ್ ಫಲಿತಾಂಶ ಬಂದಿದ್ದು, ಬರೋಬ್ಬರಿ 16 ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆ ಎಫೆಕ್ಟ್ – 25 ಪೊಲೀಸರಿಗೆ ಕೊರೊನಾ
ಕೆಲವು ಮಕ್ಕಳು ಮನೆಯಲ್ಲೇ ಕ್ವಾರಂಟೈನ್ ಆದ್ರೆ ಉಳಿದ ಮಕ್ಕಳು ವಸತಿ ಶಾಲೆಯಲ್ಲಿ ಕ್ವಾರಂಟೈನ್ ಅಗಿದ್ದಾರೆ. ಗಡಿ ಜಿಲ್ಲೆ ಬೀದರ್ ನಲ್ಲಿ ದಿನೇ ದಿನೇ ಕೊರೊನಾ ಮಹಾ ಸ್ಫೋಟವಾಗುತ್ತಿದ್ದು, ಇಂದು 165 ಜನಕ್ಕೆ ಕೊರೊನಾ ಪಾಸಿಟಿವ್ ದೃಢವಾಗುವ ಸಾಧ್ಯತೆ ಇದೆ.