ಚಿಕ್ಕಬಳ್ಳಾಪುರ: ಕೊರೊನಾ ಹೊಸ ರೂಪಾಂತರಿ ವೈಸರ್ ಓಮಿಕ್ರಾನ್ ಆತಂಕ ಇದೆ. ಈ ನಡುವೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ವಿದೇಶಗಳಿಂದ ಬಂದ 5 ಮಂದಿಗೆ ಕೊರೊನಾ ಪಾಸಿಟಿವ್ ಧೃಡಪಟ್ಟಿದೆ.
ಓಮಿಕ್ರಾನ್ ಕಾಣಿಸಿಕೊಂಡಿರುವ ದೇಶಗಳಿಂದ ಬರುವ ಎಲ್ಲ ಪ್ರಯಾಣಿಕರಿಗೂ ಏರ್‌ಪೋರ್ಟ್‌ನಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಇಂದು ಅಮೆರಿಕಾದಿಂದ ಬಂದಿರುವ ವಿಮಾನದಲ್ಲಿ ಬಂದ 5 ಮಂದಿ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಇರುವುದು ಖಾತ್ರಿಯಾಗಿದೆ.
Advertisement
Advertisement
18 ವರ್ಷದ ಇಬ್ಬರು ಯುವತಿಯರು, 24 ವರ್ಷದ ಮಹಿಳೆ, 4 ವರ್ಷದ ಹೆಣ್ಣು ಮಗು, ಹಾಗೂ 6 ವರ್ಷದ ಬಾಲಕನಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಸದಸ್ಯ 5 ಮಂದಿಯನ್ನ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ರವಾನಿಸಿ ಐಸೋಲೇಷನ್ ಮಾಡಲಾಗಿದೆ. ಇದನ್ನೂ ಓದಿ: ಫ್ರೆಂಡ್ಸ್ ಗ್ಯಾಂಗ್ ಜೊತೆ ರಾಯನ್ ರಾಜ್ ಸರ್ಜಾ
Advertisement
Advertisement
ಓಮಿಕ್ರಾನ್ ವೈರಸ್ ಸೋಂಕು ಕಾಣಿಸಿಕೊಂಡಿರುವ ದೇಶಗಳಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರನ್ನ ತಪಾಸಣೆಗೆ ಓಳಪಡಿಸಲಾಗುತ್ತಿದೆ. ಕೊರೊನಾ ಪಾಸಿಟಿವ್ ಬಂದರೆ ಹಾಸ್ಪಿಟಲ್ ಐಸೋಲೇಷನ್ ಹಾಗೂ ನೆಗೆಟಿವ್ ಬಂದವರಿಗೆ ಒಂದು ವಾರಗಳ ಕಾಳ ಹೋಂ ಐಸೋಲೇಷನ್ ಮಾಡಲಾಗುವುದು. ಪ್ರತಿ ದಿನ ಹೊಸ ಕೊರೊನಾ ಕೇಸ್‍ಗಳ ಹೆಚ್ಚಳ ಆಗುತ್ತಿದ್ದು, ಈ 5 ಮಂದಿಯ ಸ್ವಾಬ್‍ನ್ನ ಜಿನೋಮಿಕ್ ಸಿಕ್ವೇನ್ಸ್‍ಗೆ ಸಹ ಓಳಪಡಿಸಲಾಗಿದೆ.