H3N2 ಇನ್‌ಫ್ಲುಯೆಂಜಾ ಭೀತಿ ಮಧ್ಯೆ ಹೆಚ್ಚುತ್ತಿದೆ ಕೋವಿಡ್ ಸೋಂಕಿತರ ಸಂಖ್ಯೆ

Public TV
1 Min Read
CORONA 1

ನವದೆಹಲಿ: ದೇಶದಲ್ಲಿ ಕೊರೊನಾ (Corona) ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಕಳೆದ 24 ಗಂಟೆಯಲ್ಲಿ 1,000 ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 1,134 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದೆ.

ದೈನಂದಿನ ಧನಾತ್ಮಕತೆಯು ಶೇಕಡಾ 1.09 ರಷ್ಟಿದ್ದರೆ, ಸಾಪ್ತಾಹಿಕ ಸಕಾರಾತ್ಮಕತೆಯ ದರವು ಶೇಕಡಾ 0.98ರಷ್ಟಿದೆ. ಮಂಗಳವಾರ ದೆಹಲಿಯಲ್ಲಿ 83 ಕೋವಿಡ್ -19 (Covid 19) ಪ್ರಕರಣಗಳು ವರದಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸದ್ಯ ದೆಹಲಿಯಲ್ಲಿ (Delhi) ಪಾಸಿಟಿವಿಟಿ ಶೇಕಡಾ 5.83ಕ್ಕೆ ಏರಿಕೆಯಾಗಿದೆ. ಸೋಮವಾರ 34 ಪ್ರಕರಣಗಳು ದಾಖಲಾಗಿದ್ದು, ಶೇಕಡಾ 6.98ರಷ್ಟು ಪಾಸಿಟಿವಿಟಿ ದರವಿತ್ತು.

corona covid

ದೇಶದಲ್ಲಿ H3N2 ಇನ್‌ಫ್ಲುಯೆಂಜಾ (H3N2 Influenza) ಪ್ರಕರಣಗಳಲ್ಲಿ ತೀವ್ರ ಏರಿಕೆಯ ಮಧ್ಯೆ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ದೆಹಲಿಯ ಆಸ್ಪತ್ರೆಗಳಲ್ಲಿ ಹೆಚ್ಚಿನ ಇನ್‌ಫ್ಲುಯೆಂಜಾ ಪ್ರಕರಣಗಳಿಲ್ಲ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಇದನ್ನೂ ಓದಿ: ದೂರು ಕೊಡಲು ಹೋದ ಯುವತಿಯನ್ನೇ ಮಂಚಕ್ಕೆ ಕರೆದಿದ್ದ ಇನ್‌ಸ್ಪೆಕ್ಟರ್‌ ಅಮಾನತು

corona covid

ಇನ್‌ಫ್ಲುಯೆಂಜಾ ಎ ಸಬ್‌ಟೈಪ್ ಹೆಚ್3ಎನ್2 ವೈರಸ್‌ನಿಂದಾಗಿ ಇನ್‌ಫ್ಲುಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೇಳಿದೆ. H3N2 ವೈರಸ್ ಇತರ ಉಪವಿಭಾಗಗಳಿಗಿಂತ ಹೆಚ್ಚು ಆಸ್ಪತ್ರೆಗೆ ಕಾರಣವಾಗುತ್ತದೆ. ಮೂಗು ಸೋರುವುದು, ನಿರಂತರ ಕೆಮ್ಮು ಮತ್ತು ಜ್ವರ ರೋಗದ ಲಕ್ಷಣಗಳಾಗಿವೆ. ಇದನ್ನೂ ಓದಿ: ಜಿದ್ದಾಜಿದ್ದಿ ಹೋರಾಟ, ರಕ್ತಸಿಕ್ತ ರಾಜಕಾರಣಕ್ಕೆ ಫೇಮಸ್‌ ಶ್ರೀನಿವಾಸಪುರ

Share This Article