-ಡೆಲಿವರಿ ಬಾಯ್ ಸಂಪರ್ಕದಲ್ಲಿ ಇರೋರಿಗಾಗಿ ಶೋಧ
ಬೆಂಗಳೂರು: ಇಂದು ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ನಲ್ಲಿ ಆನ್‍ಲೈನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ 25 ವರ್ಷದ ಯುವಕನಿಗೆ (ರೋಗಿ ನಂಬರ್ 678) ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ.
ಡೆಲಿವರಿ ಬಾಯ್ ಆಗಿದ್ದರಿಂದ ಯುವಕನ ಟ್ರಾವೆಲ್ ಹಿಸ್ಟರಿ ಆರೋಗ್ಯ ಇಲಾಖಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಂಗಳವಾರ ಕೊರೊನಾ ಸೋಂಕು ಕಾಣಿಸಿಕೊಂಡಿದದ್ದ ಮಂಗಮ್ಮನಪಾಳ್ಯದ ಕೂಲಿ ಕಾರ್ಮಿಕನ ಪುತ್ರನೇ ಈ ಡೆಲಿವರಿ ಬಾಯ್. ಇಂದು ಕೂಲಿ ಕಾರ್ಮಿಕನ ಪತ್ನಿ ಮತ್ತು ಮಗನಿಗೆ ಕೊರೊನಾ ಧೃಡವಾಗಿದ್ದು, ಆತನ ಮಗಳ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
Advertisement
Advertisement
ಬಿಬಿಎಂಪಿ ಯುವಕ ಕೆಲಸ ಮಾಡುತ್ತಿದ್ದ ಕಂಪನಿಯಿಂದ ಆತನ ಟ್ರಾವೆಲ್ ಹಿಸ್ಟರಿ ಕಲೆ ಹಾಕುವಲ್ಲಿ ನಿರತವಾಗಿದೆ. ಅದೇ ರೀತಿ ಯುವಕನಿಂದಲೂ ಆತನ ವೈಯಕ್ತಿಕ ಟ್ರಾವೆಲ್ ಹಿಸ್ಟರಿನ್ನು ಆರೋಗ್ಯಾಧಿಕಾರಿಗಳು ಕಲೆ ಹಾಕುವಲ್ಲಿ ನಿರತರಾಗಿದ್ದಾನೆ.
Advertisement
Advertisement
ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ಬಾಗಲಕೋಟೆಯಲ್ಲಿ 13, ಬೆಂಗಳೂರು 2, ದಕ್ಷಿಣ ಕನ್ನಡ 3 ಮತ್ತು ಕಲಬುರಗಿಯಲ್ಲಿ 1 ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆಯ ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ಗರ್ಭಿಣಿ (ರೋಗಿ 607)ಯಿಂದಲೇ 13 ಮಂದಿಗೆ ಸೋಂಕು ತಗುಲಿದೆ. ಗರ್ಭಿಣಿಯ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.