ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಕೊರೊನಾ ಮೂರನೇ ಅಲೆ ಭೀತಿ ಶುರುವಾಗಿದೆ. ಕೊರೊನಾ ಸಾಂಕ್ರಮಿಕ ರೋಗ ತಡೆಗಟ್ಟಲು ಸರ್ಕಾರ ಹಲವರು ನಿಯಮಗಳನ್ನು ವಿಧಿಸಿದೆ. ಹೀಗಿದ್ದರೂ ಬೆಂಗಳೂರಿನಲ್ಲಿ ಯುವಕ ಯುವತಿಯರು ನೈಟ್ ಕರ್ಫ್ಯೂ ವೇಳೆ ಮೋಜು-ಮಸ್ತಿ ಮಾಡುತ್ತಿದ್ದಾರೆ.
Advertisement
ನಗರದ ಸದಾಶಿವನಗರದಲ್ಲಿ ಯುವಕ, ಯುವತಿಯರು ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಭರ್ಜರಿ ಮ್ಯೂಸಿಕ್ ಹಾಕಿಕೊಂಡು ಸುತ್ತಾಡಿದ್ದಾರೆ. ಅಲ್ಲದೇ ಕಾರಿನ ರೂಫ್ ಡೋರ್ ಓಪನ್ ಮಾಡಿಕೊಂಡು ಮೂವಿಂಗ್ ಕಾರಿನಲ್ಲಿ ಡ್ಯಾನ್ಸ್ ಮಾಡುತ್ತಾ, ಜೋರಾಗಿ ಕೂಗಾಡುತ್ತಾ ಪೊಲೀಸರ ಮುಂದೆಯೇ ಸಾಗಿದ್ದಾರೆ. ಇದನ್ನೂ ಓದಿ: ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್
Advertisement
ಒಟ್ಟಾರೆ ಕೊರೊನಾ ನಿಯಮವನ್ನು ಉಲ್ಲಂಘಿಸಿ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತೆ ಕಾರಿನಲ್ಲಿ ಯುವಕ, ಯುವತಿಯರು ವೀಕೆಂಡ್‍ನಲ್ಲಿ ಲೇಟ್ ನೈಟ್ ಜಾಲಿ ರೈಡ್ ಹೋಗಿದ್ದಾರೆ. ಇದೀಗ ಈ ವೀಡಿಯೋ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗುತ್ತಿದೆ. ಇದನ್ನೂ ಓದಿ: ವಿಜಯಪುರದ ಕುವರಿಗೆ ರಾಷ್ಟ್ರೀಯ ಪ್ರಶಸ್ತಿ
Advertisement
Advertisement