ಉಡುಪಿ: ಜಿಲ್ಲೆಯಲ್ಲಿ ಎರಡು ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಶಂಕಿತ ಕೊರೊನಾ ಶಂಕಿತ ರೋಗಿಗಳ ವೈದ್ಯಕೀಯ ವರದಿ ಡಿಎಚ್‍ಓ ಕೈ ಸೇರಿದೆ. ಕೊರೊನಾ ವೈರಸ್ ನೆಗೆಟಿವ್ ಎಂದು ವರದಿ ಬಂದಿದೆ.
Advertisement
ಸಾಗರ ಮೂಲದ ಮಹಿಳೆಯೊಬ್ಬರು ನಾಲ್ಕು ದಿನಗಳ ಹಿಂದೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು ಅವರ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿಲ್ಲ. ಹೀಗಾಗಿ ಮೂರನೇ ಬಾರಿಗೆ ಅವರ ಗಂಟಲಿನ ದ್ರವದ ಮಾದರಿಯನ್ನು ಶಿವಮೊಗ್ಗ ಲ್ಯಾಬ್ ಗೆ ಕಳುಹಿಸಲಾಗಿತ್ತು. ಸದ್ಯ ಈ ಮಹಿಳೆಗೆ ಕೊರೊನಾ ಇಲ್ಲ ಎಂದು ವರದಿ ಬಂದಿದೆ.
Advertisement
Advertisement
ದುಬೈ ಮೂಲದ ಮಣಿಪಾಲ ವಿವಿ ವಿದ್ಯಾರ್ಥಿಗೂ ಕೊರೊನಾ ಇಲ್ಲ ಎಂದು ವರದಿ ಬಂದಿದೆ. ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಪಾನ್ ಹಡಗಿನಲ್ಲಿ ಇದ್ದ ವ್ಯಕ್ತಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ. ಆ ಯುವಕನಲ್ಲೂ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ. ಈ ನಡುವೆ ಇಂದು ಮತ್ತೊಂದು ಶಂಕಿತ ಕೊರೊನಾ ಪ್ರಕರಣ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಶಂಕಿತ ರೋಗಿ ಜರ್ಮನ್ ಪ್ರವಾಸ ಮುಗಿಸಿ ಬಂದವರಾಗಿರುತ್ತಾರೆ. ಶೀತ ಮತ್ತು ಕೆಮ್ಮಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕಾಪು ಮೂಲದ ಈ ಯುವಕ ಸ್ವಪ್ರೇರಣೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯುವಕರ ಗಂಟಲಿನ ದ್ರವದ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.