– ಗ್ರಾಹಕರಿಗೆ ಬರೆ, ಸರ್ಕಾರದ ವಸೂಲಿಗೆ ಜನಾಕ್ರೋಶ
ಬೆಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲಿ ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರ ಬೇಕಾಬಿಟ್ಟಿ ವಿದ್ಯುತ್ ಬಿಲ್ ಶಾಕ್ ಕೊಟ್ಟಿದೆ. ಸರಾಸರಿ ಬಳಕೆ ಆಧಾರದ ಮೇಲೆ ವಿದ್ಯುತ್ ಸರಬರಾಜು ಕಂಪನಿಗಳು ಅವೈಜ್ಞಾನಿಕ ವಿದ್ಯುತ್ ಬಿಲ್ ವಸೂಲಿಗೆ ಇಳಿದಿವೆ.
ದುರ್ಭಿಕ್ಷ ಕಾಲದಲ್ಲಿ ಅಧಿಕ ಮಾಸ ಎಂಬಂತೆ ಗ್ರಾಹಕರ ಮೇಲೆ ಬರೆ ಎಳೆಯುವ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ಮಾರ್ಚ್ ತಿಂಗಳ ಬಿಲ್ ನೀಡಿರಲಿಲ್ಲ. ಮೇ ತಿಂಗಳಿನಲ್ಲಿ ಎರಡೂ ತಿಂಗಳ ಅಂದ್ರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಬಿಲ್ ನೀಡಿವೆ. ಹಿಂದಿನ ಮೂರು ತಿಂಗಳ ಸರಾಸರಿ ಆಧಾರದ ಮೇಲೆ ಬಿಲ್ ನೀಡಿರುವುದು ಅವೈಜ್ಞಾನಿಕ ಎಂದು ಸಾವಿರಾರು ಗ್ರಾಹಕರು ಆರೋಪಿಸುತ್ತಿದ್ದಾರೆ.
Advertisement
Advertisement
ವಿದ್ಯುತ್ ನಿಗಮ ಮಾರ್ಚ್, ಏಪ್ರಿಲ್ ಬಿಲ್ ಸೇರಿಸಿ ಬಿಲ್ ಕೊಡುತ್ತಿದೆ. 2 ತಿಂಗಳ ಬಿಲ್ ಅಂದರೆ ಮಾಮೂಲಿನ 2 ಪಟ್ಟು ಅಂತಿದ್ದವರಿಗೆ ಶಾಕ್ ಆಗಿದೆ. 2 ಪಟ್ಟು ಬದಲಿಗೆ ನೂರಾರು ರೂಪಾಯಿ ಹೆಚ್ಚಾಗಿ ಬಿಲ್ ಬಂದಿದೆ. ತಿಂಗಳ ಸರಾಸರಿ ವಿದ್ಯುತ್ ಬಿಲ್ 500 ರೂಪಾಯಿ ಬರುತ್ತಿತ್ತು. ಆದರೆ ಈಗ 700, 800, 1400 ರೂಪಾಯಿವರೆಗೆ ಬಿಲ್ ಬಂದಿದೆ. ಮೀಟರ್ ರೀಡಿಂಗ್ ಮಾಡದೆ ಸರಾಸರಿಯಲ್ಲಿ ಬಿಲ್ ಹಾಕಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದ್ಯುತ್ ನಿಗಮವು ಸಾಫ್ಟ್‌ವೇರ್ ಸಮಸ್ಯೆಯಿಂದ ವಿದ್ಯುತ್ ಬಿಲ್ ಹೆಚ್ಚಾಗಿದೆ ಎಂದು ಹೇಳಿದೆ. ಇತ್ತ ಬಿಲ್ ಲೋಪ-ದೋಷ ಶೀಘ್ರದಲ್ಲೇ ಸರಿಪಡಿಸ್ತೇವೆ ಅಂತ ಅಧಿಕಾರಿಗಳ ಸಬೂಬು ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಇದೇ ಸಮಸ್ಯೆ ಉಂಟಾಗಿದೆ. ಕೆಲವರು ಲಾಕ್‍ಡೌನ್ ಆರಂಭದಲ್ಲೇ ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದಾರೆ. ಸುಮಾರು ಒಂದೂವರೆ ತಿಂಗಳು ಕರೆಂಟೇ ಬಳಸಿಲ್ಲ. ಆದರೂ ಅವರಿಗೆಲ್ಲಾ ಡಬಲ್, ತ್ರಿಬಲ್ ಬಿಲ್ ಬಂದುಬಿಟ್ಟಿದೆ.
Advertisement
ಬೆಂಗಳೂರು ಗ್ರಾಹಕ ಕೃಷ್ಣಪ್ಪ ಅವರಿಗೆ ಫೆಬ್ರವರಿನಲ್ಲಿ 2,397 ರೂ. ಬಿಲ್ ಬಂದಿತ್ತು. ಏಪ್ರಿಲ್ ಬಿಲ್ ಬಂದಿಲ್ಲ. ಆದರೂ ಪೇಟಿಎಂ ಮೂಲಕ ಅವರು 2,263 ರೂ. ಕಟ್ಟಿದ್ದಾರೆ. ಈಗ 5,409 ರೂ. ಬಿಲ್ ಬಂದಿದೆ.
ಕರೆಂಟ್ ಶಾಕ್ ಮರ್ಮ:
* ವಿದ್ಯುತ್ ಬಳಕೆ ಸ್ಲ್ಯಾಬ್ ಆಧಾರದಲ್ಲಿ ಬಿಲ್ ಕೊಡ್ತಿವೆ
* ವಿದ್ಯುತ್ ಬಳಕೆ ಆಧರಿಸಿ ಬರುವ ಯೂನಿಟ್ ಮೇಲೆ ಸ್ಲ್ಯಾಬ್, ಶುಲ್ಕ ನಿಗದಿ
* ಉದಾ: ತಿಂಗಳಿಗೆ 30 ಯೂನಿಟ್ ಬಳಕೆಗೆ ಪ್ರತಿ ಯೂನಿಟ್‍ಗೆ 3.75 ರೂ. ಇದ್ದರೆ, 70 ಯೂನಿಟ್‍ವಗಿನ ಬಳಕೆಗೆ ಪ್ರತಿ ಯೂನಿಟ್‍ಗೆ 5.20 ರೂಪಾಯಿ
* 100 ಯೂನಿಟ್‍ವರೆಗಿನ ಬಳಕೆಗೆ ಪ್ರತಿ ಯೂನಿಟ್‍ಗೆ 6.75 ರೂ.
* 100 ಯೂನಿಟ್ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‍ಗೆ 7.80 ರೂ. ಇದೆ.
* ಆದರೆ, ಮೀಟರ್ ರೀಡಿಂಗ್ ಸಂದರ್ಭದಲ್ಲಿ 2 ತಿಂಗಳು ಒಟ್ಟಾಗಿ ಬಿಲ್ ಮಾಡ್ತಿದ್ದಾರೆ.
* ಇದೇ ಡಬಲ್, ತ್ರಿಬಲ್ ಬಿಲ್ ಬರ್ತಿರೋದಕ್ಕೆ ಕಾರಣ
* ಕಂಪ್ಯೂಟರ್ ಸಾಫ್ಟ್‍ವೇರ್ ಈ ಬಿಲ್‍ಗಳನ್ನು ಸರಾಸರಿ ಆಧಾರದ ಮೇಲೆ ಜನರೇಟ್ ಮಾಡ್ತಿದೆ.
* ಸ್ಲ್ಯಾಬ್ ವಿಚಾರ ಸಂಬಂಧ ಸಾಫ್ಟ್‍ವೇರ್‍ನಲ್ಲಿ ಗೊಂದಲ ಆಗಿರೋ ಸಾಧ್ಯತೆ ಇದೆ.