– ರಾಷ್ಟ್ರ ರಾಜಧಾನಿ ಫುಲ್ ರೆಡ್ ಝೋನ್?
ನವದೆಹಲಿ: ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ನಡುವೆ ಸಾವಿನ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಾಣುತ್ತಿದೆ. ಅದರಲ್ಲೂ ಇಡೀ ದೆಹಲಿ ಈಗ ರೆಡ್ ಝೋನ್ ಆಗುವ ಸಾಧ್ಯತೆಯಲ್ಲಿದ್ದು, ಸಾವಿನ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದೆ.
ಕೊರೊನಾ ದಿನದಿಂದ ದಿನಕ್ಕೆ ಹೆಚ್ಚು ಜನರಲ್ಲಿ ಕಾಣುತ್ತಿದ್ದು, ಇನ್ನೆರಡು ದಿನಗಳಲ್ಲಿ 15 ಸಾವಿರದ ಗಡಿ ದಾಟುವ ಸಾಧ್ಯತೆ ಕಂಡು ಬರುತ್ತಿದೆ. ಈ ನಡುವೆ ಸಾವಿನ ಪ್ರಮಾಣದಲ್ಲೂ ಏರಿಕೆ ಕಂಡು ಬರುತ್ತಿದ್ದು ಆತಂಕ ಹೆಚ್ಚು ಮಾಡುತ್ತಿದೆ.
Advertisement
Advertisement
ಈವರೆಗೂ ದೇಶದಲ್ಲಿ 13,425 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 446 ಮಂದಿ ಮೃತಪಟ್ಟಿದ್ದಾರೆ. ಹೀಗೆ ಸಾವನ್ನಪ್ಪಿದವರ ಪೈಕಿ ರಾಷ್ಟ್ರ ರಾಜಧಾನಿ ದೆಹಲಿ ಜನರ ಸಂಖ್ಯೆಯೇ ಹೆಚ್ಚು. ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸಾವಿನ ಪ್ರಮಾಣದಲ್ಲಿ ದೆಹಲಿ ಒಂದನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ.
Advertisement
ಕೊರೊನಾಗೆ ಯಾವ ರಾಜ್ಯದಲ್ಲಿ ಎಷ್ಟು ಸಾವು?
* ದೆಹಲಿ – ಸೋಂಕಿತರ ಸಂಖ್ಯೆ 1,640, 38 ಮಂದಿ ಸಾವು – ಡೆತ್ ರೇಟಿಂಗ್‍ನಲ್ಲಿ ಮೊದಲನೇ ಸ್ಥಾನ
* ಮಹಾರಾಷ್ಟ್ರ – 3,202 ಮಂದಿಯಲ್ಲಿ ಸೋಂಕು – 194 ಮಂದಿ ಸಾವು – ಡೆತ್ ರೇಟಿಂಗ್‍ನಲ್ಲಿ ಎರಡನೇ ಸ್ಥಾನ
* ಮಧ್ಯಪ್ರದೇಶ – 1,164 ಮಂದಿಯಲ್ಲಿ ಸೋಂಕು – 55 ಮಂದಿ ಸಾವು – ಡೆತ್ ರೇಟಿಂಗ್‍ನಲ್ಲಿ ಮೂರನೇ ಸ್ಥಾನ
* ಗುಜರಾತ್ – 929 ಸೋಂಕಿತರು – 36 ಮಂದಿ ಸಾವು – ಡೆತ್ ರೇಟಿಂಗ್‍ನಲ್ಲಿ ನಾಲ್ಕನೇ ಸ್ಥಾನ
* ತೆಲಂಗಾಣ – 700 ಜನರಿಗೆ ಡೆಡ್ಲಿ ವೈರಸ್ – 18 ಜನ ಸಾವು – ಡೆತ್ ರೇಟಿಂಗ್‍ನಲ್ಲಿ ಐದನೇ ಸ್ಥಾನ
* ಕರ್ನಾಟಕ – 315 ಕೊರೊನಾ ಕೇಸ್ – 13 ಮಂದಿ ಸಾವು – ಡೆತ್ ರೇಟಿಂಗ್‍ನಲ್ಲಿ ಹತ್ತನೇ ಸ್ಥಾನ
Advertisement
ಒಟ್ಟು ಜನಸಂಖ್ಯೆ ಮತ್ತು ಸೋಂಕಿತರ ಸಾವಿನ ಪ್ರಮಾಣ ಆಧರಿಸಿ ಈ ಅಂಕಿ ಅಂಶಗಳನ್ನು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.
ರಾಷ್ಟ್ರ ರಾಜಧಾನಿ ಫುಲ್ ರೆಡ್ ಝೋನ್?
ಸಾವಿನ ಪ್ರಮಾಣದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ದೆಹಲಿ ಫುಲ್ ರೆಡ್ ಝೋನ್ ಆಗುವ ಸಾಧ್ಯತೆಗಳಿದೆ. ದೆಹಲಿಯಲ್ಲಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಆರಂಭದಲ್ಲಿ 34 ಪ್ರದೇಶಗಳನ್ನು ಸೀಲ್‍ಡೌನ್ ಮಾಡಿತ್ತು. ಬಳಿಕ 45, ಈಗ ಬರೋಬ್ಬರಿ 60 ಪ್ರದೇಶಗಳನ್ನು ಹಾಟ್‍ಸ್ಪಾಟ್ ಅಂತ ಗುರುತಿಸಿ ಸೀಲ್‍ಡೌನ್ ಮಾಡಿದೆ. ಈ ಪಟ್ಟಿ ಮತ್ತಷ್ಟು ದೊಡ್ಡದಾಗಲಿದ್ದು, ದೆಹಲಿಯ ಬಹುತೇಕ ಪ್ರದೇಶ ರೆಡ್ ಮತ್ತು ಆರೇಂಜ್ ಝೋನ್‍ನಲ್ಲಿದೆ. ಇದು ಮುಂದೆ ಇಡೀ ದೆಹಲಿಯನ್ನ ರೆಡ್‍ಝೋನ್‍ಗೆ ನೂಕುವ ಸಾಧ್ಯತೆ ಇದೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿ ಜನರಿಗೆ ಕೊರೊನಾ ಭೀತಿ ಹೆಚ್ಚಾಗಿದೆ.