ನವದೆಹಲಿ: ಲಾಕ್ ಡೌನ್ ಅವಧಿಯಲ್ಲಿ ಬುಕ್ ಮಾಡಲಾಗಿದ್ದ ಎಲ್ಲ ಮುಗಂಡ ಟಿಕೆಟ್ ಗಳ ಹಣ ವಾಪಸ್ ನೀಡುವಂತೆ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ವಿಮಾನಯಾನ ಸಚಿವಲಾಯ ಸೂಚನೆ ನೀಡಿದೆ.
ಇಂದು ಖಾಸಗಿ ವಿಮಾನಯಾನ ಸಂಸ್ಥೆಗಳ ಸಿಇಓಗಳ ಸಭೆ ನಡೆಸಿದ ಸಚಿವಲಾಯ ಈ ಖಡಕ್ ಸೂಚನೆ ನೀಡಿದೆ. ಗ್ರಾಹಕರಿಗೆ ಮರು ಪ್ರಯಾಣ ನಿಗದಿ ಮಾಡಿಕೊಳ್ಳಲು ಸೂಚಿಸುವಂತಿಲ್ಲ. ಗ್ರಾಹಕ ಟಿಕೆಟ್ ರದ್ದು ಮಾಡಲು ಬಯಸಿದರೆ, ದಂಡವನ್ನು ವಿಧಿಸದೇ ಸಂಪೂರ್ಣ ಹಣ ವಾಪಸ್ ನೀಡಬೇಕು. ಇದು ಅಂತರಾಷ್ಟ್ರೀಯ ಮತ್ತು ದೇಶಿಯ ಟಿಕೆಟ್ ಗಳಿಗೂ ಅನ್ವಯವಾಗಲಿದೆ ಎಂದು ಸೂಚಿಸಲಾಗಿದೆ.
Advertisement
Advertisement
ಕೊರೊನಾ ವೈರಸ್ ಹಿನ್ನೆಲೆ ಮಾರ್ಚ್ 24 ರಿಂದ ಮೇ3 ವರೆಗೂ ಲಾಕ್‍ಡೌನ್ ಹೇರಲಾಗಿದ್ದು, ಈ ವೇಳೆ ಎಲ್ಲ ಅಂತರರಾಷ್ಟ್ರೀಯ ದೇಶಿಯ ವಿಮಾನಗಳ ಹಾರಾಟ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಬುಕ್ ಮಾಡಿದ್ದ ಟಿಕೆಟ್‍ಗಳ ಹಣ ಮರು ಪಾವತಿ ಮಾಡಲು ಕೆಲ ಕಂಪನಿಗಳು ಹಿಂದೇಟು ಹಾಕಿದ್ದಲ್ಲದೇ ಬದಲಿ ಪ್ರಯಾಣ ದಿನಾಂಕ ನಿಗದಿ ಮಾಡಿಕೊಳ್ಳಲು ಸೂಚಿಸಿದ್ದವು. ಇದೇ ಮಾದರಿಯಲ್ಲಿ ಗ್ರಾಹಕರಿಂದ ಹಲವು ದೂರುಗಳ ದಾಖಲಾದ ಹಿನ್ನೆಲೆ ಇಂದು ಸಭೆ ನಡೆಸಿ ಈ ಸೂಚನೆ ನೀಡಲಾಗಿದೆ.