– ಮುಂಬೈನಿಂದ ಶವ ತಂದು ಅಂತ್ಯಕ್ರಿಯೆ ಪ್ರಕರಣ
ಮಂಡ್ಯ: ಮುಂಬೈನಿಂದ ಶವ ತಂದು ಜಿಲ್ಲೆಯಲ್ಲಿ ಅಂತ್ಯಕ್ರಿಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಎಸ್.ಪುಟ್ಟರಾಜು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಪುಟ್ಟರಾಜು, ಮುಂಬೈನಿಂದ ಮೃತದೇಹ ಬಂದಂತಹ ಸಂದರ್ಭದಲ್ಲಿ ಹಾಸನ ಜಿಲ್ಲೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ವ್ಯಕ್ತಿಯ ಸಂಬಂಧಿಕರು ಹತ್ತಿರದಿಂದ ಅಂತಿಮ ದರ್ಶನ ಮಾಡಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಮುಂಬೈನಿಂದ ಅಂಬುಲೆನ್ಸ್‌ನಲ್ಲೇ ಬಂದ ವ್ಯಕ್ತಿಯೊಬ್ಬ ಕೆ.ಆರ್.ಪೇಟೆಯಲ್ಲಿ ಇಳಿದುಕೊಂಡಿದ್ದಾನೆ. ಹೀಗಾಗಿ ಮೊದಲು ಆತನ ಎಲ್ಲಿ ಹೋಗಿದ್ದಾನೆ ಎಂದು ಪತ್ತೆ ಮಾಡಬೇಕು ಎಂದರು. ಇದನ್ನೂ ಓದಿ: ಮಂಡ್ಯದಲ್ಲಿ ಕೊರೊನಾ ಆತಂಕ ಮತ್ತಷ್ಟು ಹೆಚ್ಚಳ- ಬಿ. ಕೊಡಗಹಳ್ಳಿ ಸೀಲ್‍ಡೌನ್
Advertisement
ವ್ಯಕ್ತಿ ಕೊರೊನಾ ಬಂದಿದ್ದರಿಂದ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರೇ ಹೇಳುತ್ತಿದ್ದಾರೆ. ಹೀಗಾಗಿ ಅಂತ್ಯಸಂಸ್ಕಾರಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿಲ್ಲ. ಈ ಬಗ್ಗೆ ನನಗೆ ಗ್ರಾಮಸ್ಥರಿಂದಲೇ ಮಾಹಿತಿ ಬಂದಿದೆ. ಶವ ತರುತ್ತಿರುವ ವಿಷಯವನ್ನು ಗ್ರಾಮಸ್ಥರು ನನಗೆ ತಿಳಿಸಿದ್ದರು. ತಕ್ಷಣ ನಾನು ಅಧಿಕಾರಿಗಳಿಗೆ ಫೋನ್ ಮಾಡಿ, ಯಾವ ಕಾರಣಕ್ಕೂ ನಮ್ಮ ತಾಲೂಕಿಗೆ ಶವ ಪ್ರವೇಶ ಮಾಡದಂತೆ ಸೂಚಿಸಿದ್ದೆ. ಹೀಗಾಗಿ ತಾಲೂಕು ಗಡಿಯಲ್ಲೇ ಅಧಿಕಾರಿಗಳು ವಾಹನ ತಡೆದಿದ್ದಾರೆ. ಜೊತೆಗೆ ಮುಂಜಾಗ್ರತ ಕ್ರಮ ಕೈಗೊಂಡು ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ತಿಳಿಸಿದರು.
Advertisement
Advertisement
ಅಂಬುಲೆನ್ಸ್ ಎಲ್ಲಿಲ್ಲಿ ನಿಂತಿದೆ ಎಂದು ಪರಿಶೀಲನೆ ಮಾಡಬೇಕು. ಮುಂಬೈ ಅಧಿಕಾರಿಗಳು ಫೇಕ್ ಸರ್ಟಿಫಿಕೇಟ್ ಕೊಟ್ಟಿದ್ದು, ಮಹಾರಾಷ್ಟ್ರದಿಂದ ಸರ್ಕಾರಿ ವಾಹನದಲ್ಲೇ ಶವ ಬಂದಿದೆ. ಹೀಗಾಗಿ ಇದರ ಹಿಂದೆ ದೊಡ್ಡ ಕೈ ಕೆಲಸ ಮಾಡಿದೆ ಎಂಬುದು ನನ್ನ ಅಭಿಪ್ರಾಯ. ಇಂತಹ ಘಟನೆಯಿಂದ ನಮಗೆ ಆತಂಕ ಉಂಟಾಗಿದೆ. ಆದ್ದರಿಂದ ಸರ್ಕಾರ ಇದರ ಬಗ್ಗೆ ಎಚ್ಚೆತ್ತು ತನಿಖೆ ನಡೆಸಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಪುಟ್ಟರಾಜು ಒತ್ತಾಯಿಸಿದರು.