ಕೊರೊನಾ ಎಫೆಕ್ಟ್- ಕುಡಿತ ಬಿಟ್ಟು ಹೊಸ ಬದುಕು ಕಟ್ಟಿಕೊಂಡ ವೃದ್ಧ

Public TV
1 Min Read
CKB Kuri copy

-ಕುರಿ ಸಾಕಾಣಿಕೆಗೆ ಮುಂದಾದ ವ್ಯಕ್ತಿ

ಚಿಕ್ಕಬಳ್ಳಾಪುರ: ಕೊರೊನಾ ಎಫೆಕ್ಟ್ ನಡುವೆ ಮದ್ಯ ಸಿಗದೆ ಪರದಾಡಿದವರೇ ಹೆಚ್ಚು. ಆದರೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಮದ್ಯವ್ಯಸನಿ ವೃದ್ಧನೋರ್ವ ಕುಡಿತ ಬಿಟ್ಟು ಕುರಿ ತಂದು ಸಾಕಾಣಿಕೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಗ್ರಾಮದ ಚಿಕ್ಕಮುನಿಯಪ್ಪ ಎಂಬವರು ಮದ್ಯವ್ಯಸನಿಂದ ದೂರು ಬಂದು ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಲಾಕ್‍ಡೌನ್ ನಡುವೆ ಎಣ್ಣೆ ಸಿಗದೇ ಪರಿತಪ್ಪಿಸಿದ್ದ ಚಿಕ್ಕಮುನಿಯಪ್ಪ ಕೊನಗೆ ಮದ್ಯಕ್ಕೆ ವಿದಾಯ ಹೇಳಿ ಈಗ ಎರಡು ಕುರಿ ತಂದು ಸಾಕಾಣಿಕೆ ಮಾಡಲು ಮುಂದಾಗಿದ್ದಾರೆ. ಸುಮಾರು 6,000 ರೂ.ನಿಂದ ಒಂದು ಕುರಿ ಹಾಗೂ ಕುರಿ ಮರಿ ಖರೀದಿಸಿ ಈಗ ಅವುಗಳ ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದಾರೆ.

CKB Kuri 2

ಹಲವು ವರ್ಷಗಳಿಂದಲೂ ಮದ್ಯ ವ್ಯಸನಿಯಾಗಿದ್ದ ಚಿಕ್ಕಮನಿಯಪ್ಪ ಕೂಲಿ ನಾಲಿ ಮಾಡಿ ಬಂದ ಹಣವನ್ನೆಲ್ಲಾ ಮದ್ಯ ಖರೀದಿಗೆ ಬಳಸುತ್ತಿದ್ದರು. ಆದರೆ ಈಗ ಕೊರೊನಾ ಎಫೆಕ್ಟ್ ನಿಂದ ಮದ್ಯವೂ ಸಿಗದೆ ಪರಿತಪಿಸಿದ್ದ ಚಿಕ್ಕಮುನಿಯಪ್ಪರಿಗೆ ಮೊದ ಮೊದಲು ಕೈ ಕಾಲು ನಡುಗುವುದು, ಅದರುವುದು ಆಗಿದೆ. ಆದರೆ ಗಟ್ಟಿ ಮನಸ್ಸು ಮಾಡಿದ ಚಿಕ್ಕಮುನಿಯಪ್ಪ ದಿನದಿಂದ ದಿನಕ್ಕೆ ಮದ್ಯದ ಮೇಲಿನ ವ್ಯಾಮೋಹ ಕಡಿಮೆ ಮಾಡಿಕೊಂಡಿದ್ದಾರೆ. ಕೊನೆಗೆ ಎರಡು ಕುರಿ ಮರಿ ತಂದು ಸಾಕುವ ನಿರ್ಧಾರ ಮಾಡಿ ಕುರಿ ಹಾಗೂ ಮರಿಯೊಂದನ್ನ ಖರೀದಿ ಮಾಡಿ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

CKB Kuri 1.jpg

ಇನ್ನೂ ಮೂರು ದಿನಗಳಿಂದ ಮದ್ಯ ಮಾರಾಟ ನಡೆಯುತ್ತಿದ್ದರೂ, ಎಣ್ಣೆ ಸಿಗುತ್ತೆ ಅಂತ ಗೊತ್ತಿದ್ರೂ ಮದ್ಯದತ್ತ ಮುಖ ಮಾಡದ ಚಿಕ್ಕಮುನಿಯಪ್ಪ, ಕುರಿಗಳ ಸಾಕಾಣಿಕೆ ಜೊತೆಗೆ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಈ ವೃದ್ಧನ ಮಾದರಿ ನಿರ್ಧಾರಕ್ಕೆ ಗ್ರಾಮಸ್ಥರು ಸೇರಿದಂತೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆಚ್ಚಿನ ಕುರಿಗಳನ್ನ ತಂದು ಸಾಕಾಣಿಕೆ ಮಾಡಬೇಕು ಎಂದು ವೃದ್ದ ಚಿಕ್ಕಮುನಿಯಪ್ಪ ಹೇಳುತ್ತಾರೆ.

Share This Article