ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕಳೆದ 24 ಗಂಟೆಯಲ್ಲಿ 28,264 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 37,85,295ಕ್ಕೆ ಏರಿಕೆಯಾಗಿದೆ.
Advertisement
ರಾಜ್ಯದಲ್ಲಿ ಮಹಾಮಾರಿ ಕೊರೊನಾದಿಂದ ಇಂದು 68 ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 38,942ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 11,938 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 17,10,198ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ ಕೊರೊನಾದಿಂದ 14 ಸೋಂಕಿತರು ಮೃತಪಟ್ಟಿದ್ದಾರೆ.
Advertisement
Advertisement
ರಾಜ್ಯದಲ್ಲಿ ಇಂದು 29,244 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 34,95,239ಕ್ಕೆ ಏರಿಕೆಯಾಗಿದೆ. ಇನ್ನು 2,51,084 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
Advertisement
ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ ಬಾಗಲಕೋಟೆ 338, ಬಳ್ಳಾರಿ 964, ಬೆಳಗಾವಿ 619, ಬೆಂಗಳೂರು ಗ್ರಾಮಾಂತರ 453, ಬೆಂಗಳೂರು ನಗರ 11,938, ಬೀದರ್ 111, ಚಾಮರಾಜನಗರ 554, ಚಿಕ್ಕಬಳ್ಳಾಪುರ 334, ಚಿಕ್ಕಮಗಳೂರು 201, ಚಿತ್ರದುರ್ಗ 360, ದಕ್ಷಿಣ ಕನ್ನಡ 419 ಸೋಂಕು ದಾಖಲಾಗಿದೆ.
ದಾವಣಗೆರೆ 239, ಧಾರವಾಡ 1356, ಗದಗ 146, ಹಾಸನ 859, ಹಾವೇರಿ 409, ಕಲಬುರಗಿ 564. ಕೊಡಗು 633, ಕೋಲಾರ 422, ಕೊಪ್ಪಳ 321, ಮಂಡ್ಯ 953, ಮೈಸೂರು 2322, ರಾಯಚೂರು 306, ರಾಮನಗರ 246, ಶಿವಮೊಗ್ಗ 530, ತುಮಕೂರು 1165, ಉಡುಪಿ 441, ಉತ್ತರ ಕನ್ನಡ 780, ವಿಜಯಪುರ 159, ಯಾದಗಿರಿ 122 ಹೊಸ ಪ್ರಕರಣಗಳು ಪತ್ತೆಯಾಗಿವೆ.