ಬೆಂಗಳೂರು: ಈ ವರ್ಷದಲ್ಲೇ ಮೇಡ್ ಇನ್ ಇಂಡಿಯಾ ಕೋವಿಡ್ -19 ಔಷಧಿ ಲಭ್ಯವಾಗಲಿದೆ ಎಂದು ಬಯೋಕಾನ್ ಕಂಪನಿಯ ಆಡಳಿತ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.
ಈಗಾಗಲೇ ಎರಡು, ಮೂರು ಸಣ್ಣ ಕಂಪನಿಗಳು ಔಷಧಿ ಅಭಿವೃದ್ಧಿ ಪಡಿಸುತ್ತಿವೆ. ಈ ಕಂಪನಿಗಳು ದೊಡ್ಡ ಕಂಪನಿಗಳ ಸಹಯೋಗದೊಂದಿಗೆ ಔಷಧಿ ತಯಾರಿಸುವ ಕೆಲಸ ಮಾಡುತ್ತಿವೆ. ನಾವು ಔಷಧಿ ನಿರ್ಮಾಣಕ್ಕೆ ಕೈ ಹಾಕಿದ್ದೇವೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
Advertisement
Advertisement
ಪ್ಲಾಸ್ಮಾ ಥೆರಪಿ ಬಗ್ಗೆ ಕೇಳಲಾದ ಪ್ರಶ್ನೆಗೆ, ಪ್ಲಾಸ್ಮಾ ಥೆರಪಿ ಸಂಬಂಧ ಕೋವಿಡ್-19ನಿಂದ ಗುಣಮುರಾದ ರೋಗಿಗಳ ರಕ್ತ ಸಂಗ್ರಹಿಸುವ ವಿಚಾರದ ಬಗ್ಗೆ ನಾನು ಕೆಲ ರಾಜ್ಯಗಳ ಜೊತೆ ಚರ್ಚಿಸಿದ್ದೇನೆ. ಈ ಪ್ಲಾಸ್ಮಾ ಕೊರೊನಾ ವೈರಸ್ ಅನ್ನು ನಾಶ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
Advertisement
ಈಗಾಗಲೇ ನಮ್ಮ ಬಳಿ ಹಲವು ಡೇಟಾಗಳಿವೆ. ಪ್ಲಾಸ್ಮಾ ಥೆರಪಿ ಯಶಸ್ವಿಯಾದ ಹಲವು ಉದಾಹರಣೆಗಳಿವೆ. 1918ರ ಸ್ಪ್ಯಾನಿಶ್ ಜ್ವರಕ್ಕೆ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೊರೊನಾ ವೈರಸ್‍ಗೆ ಭಾರತೀಯ ವಿಜ್ಞಾನಿಯಿಂದ ಔಷಧಿ ಎಸ್.ಎಸ್. ವಾಸನ್ ನೇತೃತ್ವದಲ್ಲಿ ಸಂಶೋಧನೆ
Advertisement
ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಭಾರತ ಸರ್ಕಾರ ಕ್ರಮವನ್ನು ಶ್ಲಾಘಿಸಿದ ಅವರು, ಕ್ವಾರಂಟೈನ್ ವಿಧಾನ, ರಾಷ್ಟ್ರಮಟ್ಟದ ಲಾಕ್‍ಡೌನ್, ವಲಯವಾರು ಝೋನ್ ಗಳಿಂದ ನಿಯಂತ್ರಣವಾಗಿದೆ. ಸದ್ಯಕ್ಕೆ ನಾವು ಸೇಫ್ ಜಾಗದಲ್ಲಿದೆ ಎಂದರು.
ಕಳೆದ 5 ವಾರಗಳ ಲಾಕ್‍ಡೌನ್ ನಿಂದ ಭಾರತ ಹಲವು ಪಾಠಗಳನ್ನು ಕಲಿತಿದೆ. ಭಾರತದ ಆಸ್ಪತ್ರೆಗಳು ರೋಗಿಗಳಿಂದ ಭರ್ತಿ ಆಗಿಲ್ಲ. ಕಡಿಮೆ ಸಂಖ್ಯೆಯ ರೋಗಿಗಳು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಭಾರತದಲ್ಲಿ ಶೇ.90 ರಷ್ಟು ಜನರು 60 ವರ್ಷದ ಒಳಗಿನವರು. ವಿಶ್ವದಲ್ಲಿ ಶೇ.80 ರಷ್ಟು ಮೃತಪಟ್ಟವರು 60 ವರ್ಷ ಮೇಲ್ಪಟ್ಟವರು ಎಂದು ಅಭಿಪ್ರಾಯಪಟ್ಟರು.
ನನ್ನ ಪ್ರಕಾರ ಮೇ 3 ರಿಂದ ಹಂತ ಹಂತವಾಗಿ ಲಾಕ್‍ಡೌನ್ ತೆಗೆದು ಜೂನ್ ಕೊನೆಯಲ್ಲಿ ಎಲ್ಲ ಸೇವೆ ಆರಂಭಿಸಬಹುದು. ಆರ್ಥಿಕತೆಗೆ ಸಮಸ್ಯೆಯಾಗುತ್ತದೆ. ಆದರೆ ಜೀವವೂ ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಕೆಲ ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣವಾಗಬೇಕು. ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಸಾಕಷ್ಟು ಪ್ರಕರಣಗಳು ವರದಿಯಾಗಿದೆ. ಕರ್ನಾಟಕ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಕಡಿಮೆ ಸಾವಾಗಿದೆ. ಪಾಸಿಟಿವ್ ಪ್ರಕರಣಗಳು ಜಾಸ್ತಿ ಇದ್ದರೂ ಮೃತಪಡುವವರ ಸಂಖ್ಯೆ ಕಡಿಮೆ ಇರುವ ಕಾರಣ ನಾವು ಸುರಕ್ಷಿತ ವಲಯದಲ್ಲಿದ್ದೇವೆ ಎಂದು ತಿಳಿಸಿದರು.